* ಆಗ್ನೇಯ ಏಷ್ಯಾದ ದೇಶದೊಂದಿಗೆ ಹೆಚ್ಚುತ್ತಿರುವ ವ್ಯಾಪಾರ ಕೊರತೆಯ ನಡುವೆ ಭಾರತವು ರಫ್ತಿಗಿಂತ ಆಮದು ಹೆಚ್ಚಾಗಿರುವ ಹಿನ್ನಲೆಯಲ್ಲಿ ಮಲೇಷ್ಯಾದೊಂದಿಗೆ ತನ್ನ ವ್ಯಾಪಾರ ಒಪ್ಪಂದವನ್ನು ಪರಿಶೀಲಿಸುತ್ತಿದೆ.
* ಭಾರತ-ಮಲೇಷ್ಯಾ ಸಮಗ್ರ ಆರ್ಥಿಕ ಸಹಕಾರ ಒಪ್ಪಂದಕ್ಕೆ 2011 ರ ಹಣಕಾಸು ವರ್ಷದಲ್ಲಿ ಸಹಿ ಹಾಕಲಾಯಿತು. ಈ ಒಪ್ಪಂದವು ಎರಡು ದೇಶಗಳಿಗೆ ಸರಕು ಸೇವೆ ಹಾಗೂ ಹೂಡಿಕೆಯನ್ನು ಹೆಚ್ಚಿಸಲು ನೆರವಾಗಿದೆ.
* ಭಾರತ ಮತ್ತು ಮಲೇಷ್ಯಾ ವ್ಯಾಪಾರದ ಅಂತರವು $ 2.6 ಶತಕೋಟಿ ಆಗಿತ್ತು, ಇದು FY24 ರಲ್ಲಿ $ 5.5 ಶತಕೋಟಿಗೆ ದ್ವಿಗುಣಗೊಂಡಿದೆ. ಇದು ಉಭಯ ದೇಶಗಳ ನಡುವಿನ ಅಸಮತೋಲನವನ್ನು ಪ್ರತಿಬಿಂಬಿಸತ್ತದೆ.
* ವಾಣಿಜ್ಯ ಇಲಾಖೆಯು ಮಲೇಷ್ಯಾಕ್ಕೆ ರಫ್ತು ಮಾಡುವಾಗ ಭಾರತೀಯ ಉದ್ಯಮವು ಎದುರಿಸುತ್ತಿರುವ ಸುಂಕ ರಹಿತ ಅಡೆತಡೆಗಳ ಪಟ್ಟಿಯನ್ನು ಸಹ ರಚಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
* ಆರ್ಥಿಕ ಸಂಭಂದವನ್ನು ಬಲಪಡಿಡುವುದು ಮತ್ತು ವ್ಯಾಪಾರ ಹೆಚ್ಚಿಸುವುದು ಈ ಒಪ್ಪಂದದ ಗುರಿಯಾಗಿದೆ. ಆದರೆ ಬೆಳೆಯುತ್ತಿರುವ ವ್ಯಾಪಾರದ ಕೊರತೆಯು ಒಪ್ಪಂದದ ಕೆಲವು ನಿಯಮಗಳನ್ನು ಪರಿಶೀಲಿಸುವಂತೆ ಮಾಡಿದೆ.
ಸೋಮವಾರ, 09 ಸೆಪ್ಟೆಂಬರ್ 2024
1:19 ಅಪರಾಹ್ನ
Daily PDF
ಮಲೇಷ್ಯಾ ಜೊತೆಗಿನ ವ್ಯಾಪಾರ ಒಪ್ಪಂದವನ್ನು ಪರಿಶೀಲಿಸಲು ಸಜ್ಜಾದ ಭಾರತ
Authored by:
Jyoti Angadi