➤ ಮಿಜೋರಾಂ ರಾಜ್ಯದ ಉದಯವು ದಶಕಗಳ ಹೋರಾಟ ಮತ್ತು ಶಾಂತಿ ಒಪ್ಪಂದದ ಫಲವಾಗಿದೆ. ಇದರ ಪ್ರಮುಖ ಮೈಲಿಗಲ್ಲುಗಳು ಇಲ್ಲಿವೆ:
- 1959-60ರ ಮೌಟಮ್ ಕ್ಷಾಮ: ಈ ಕ್ಷಾಮದ ಸಮಯದಲ್ಲಿ ಉಂಟಾದ ಅಸಮಾಧಾನವು 'ಮಿಜೋ ನ್ಯಾಷನಲ್ ಫ್ಯಾಮಿನ್ ಫ್ರಂಟ್' (ನಂತರ MNF) ರಚನೆಗೆ ಕಾರಣವಾಯಿತು.
- ಕೇಂದ್ರಾಡಳಿತ ಪ್ರದೇಶ: 1972 ರಲ್ಲಿ ಅಸ್ಸಾಂನಿಂದ ಬೇರ್ಪಟ್ಟ ಮಿಜೋರಾಂಗೆ ಕೇಂದ್ರಾಡಳಿತ ಪ್ರದೇಶದ (UT) ಸ್ಥಾನಮಾನ ನೀಡಲಾಯಿತು.
- ಮಿಜೋರಾಂ ಶಾಂತಿ ಒಪ್ಪಂದ (1986): ಭಾರತ ಸರ್ಕಾರ ಮತ್ತು ಲಾಲ್ಡೆಂಗಾ ನೇತೃತ್ವದ MNF ನಡುವೆ ಐತಿಹಾಸಿಕ ಶಾಂತಿ ಒಪ್ಪಂದ ಏರ್ಪಟ್ಟಿತು. ಇದು ಭಾರತದ ಅತ್ಯಂತ ಯಶಸ್ವಿ ಶಾಂತಿ ಒಪ್ಪಂದಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.
- ರಾಜ್ಯೋತ್ಸವ: ಫೆಬ್ರವರಿ 20, 1987 ರಂದು ಮಿಜೋರಾಂ ಅಧಿಕೃತವಾಗಿ ಭಾರತದ 23ನೇ ರಾಜ್ಯವಾಯಿತು.
- 53ನೇ ಸಂವಿಧಾನ ತಿದ್ದುಪಡಿ ಕಾಯ್ದೆ, 1986: ಈ ತಿದ್ದುಪಡಿಯ ಮೂಲಕ ಮಿಜೋರಾಂಗೆ ರಾಜ್ಯದ ಸ್ಥಾನಮಾನ ನೀಡಲು ದಾರಿ ಮಾಡಿಕೊಡಲಾಯಿತು.
- ವಿಶೇಷ ರಕ್ಷಣೆ: ಸಂವಿಧಾನದ ವಿಧಿ 371-G ಅಡಿಯಲ್ಲಿ ಮಿಜೋರಾಂನ ಧಾರ್ಮಿಕ, ಸಾಮಾಜಿಕ ಆಚರಣೆಗಳು ಮತ್ತು ಸಾಂಪ್ರದಾಯಿಕ ಕಾನೂನುಗಳಿಗೆ ವಿಶೇಷ ರಕ್ಷಣೆ ನೀಡಲಾಗಿದೆ.
➤ ಮಿಜೋರಾಂ: ಒಂದು ನೋಟ :
ರಾಜಧಾನಿ: ಐಜ್ವಾಲ್ (Aizawl)
ರಾಜ್ಯ ಪ್ರಾಣಿ: ಸೆರೋ (Saza)
ರಾಜ್ಯ ಪಕ್ಷಿ: ಹ್ಯೂಮ್ಸ್ ಬಾರ್ಟೈಲ್ಡ್ ಫೆಸೆಂಟ್
ರಾಜ್ಯ ಮರ: ನಾಗಕೇಸರಿ (Ironwood)
ಪ್ರಸಿದ್ಧ ನೃತ್ಯ: ಚೆರಾವ್ (ಬಿದಿರು ನೃತ್ಯ)
ಅತಿ ಎತ್ತರದ ಶಿಖರ: ಫಾಂಗ್‌ಪುಯಿ (ನೀಲಿ ಪರ್ವತ)
ಸಾಕ್ಷರತೆ: 91% ಕ್ಕಿಂತ ಹೆಚ್ಚು (ಭಾರತದಲ್ಲಿ ದ್ವಿತೀಯ ಸ್ಥಾನ)