* ಮಿಸ್ ಯೂನಿವರ್ಸ್ ಇಂಡಿಯಾ 2024 ರ ಗ್ರ್ಯಾಂಡ್ ಫಿನಾಲೆ ರಾಜಸ್ಥಾನದ ಜೈಪುರದಲ್ಲಿ ನಡೆಯಿತು. ರಿಯಾ ಸಿಂಘಾ ಮಿಸ್ ಯೂನಿವರ್ಸ್ ಇಂಡಿಯಾ 2024 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
* ರಿಯಾ ಸಿಂಘಾ ಅವರು ಈಗ ಜಾಗತಿಕ ಮಿಸ್ ಯೂನಿವರ್ಸ್ 2024 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
* ಪ್ರಾಂಜಲ್ ಪ್ರಿಯಾ 1 ನೇ ರನ್ನರ್-ಅಪ್ ಎಂದು ಹೆಸರಿಸಲ್ಪಟ್ಟರು. ಛವಿ ವರ್ಗ್ 2 ನೇ ರನ್ನರ್-ಅಪ್ ಪಡೆದರು. ಸುಶ್ಮಿತಾ ರಾಯ್ ಮತ್ತು ರೂಪ್ಫುಝಾನೊ ವಿಸೊ ಕ್ರಮವಾಗಿ 3ನೇ ಮತ್ತು 4ನೇ ರನ್ನರ್-ಅಪ್ ಸ್ಥಾನಗಳನ್ನು ಪಡೆದರು.
* 18 ವರ್ಷದ ರಿಯಾ ಸಿಂಘಾ ಗುಜರಾತ್ ಮೂಲದವರಾಗಿದ್ದು, ಸ್ಪರ್ಧೆಯಲ್ಲಿದ್ದ 50ಕ್ಕೂ ಅಧಿಕ ಚೆಲುವೆಯರನ್ನು ಹಿಂದಿಕ್ಕಿ ವಿಜೇತರಾಗಿದ್ದಾರೆ.
* ನಟಿ ಮತ್ತು ಮಿಸ್ ಯೂನಿವರ್ಸ್ ಇಂಡಿಯಾ 2015 ಊರ್ವಶಿ ರೌಟೇಲಾ ಈವೆಂಟ್‌ನಲ್ಲಿ ತೀರ್ಪುಗಾರರಾಗಿದ್ದರು. ಭಾರತವು ಈ ವರ್ಷ ಮತ್ತೆ ವಿಶ್ವ ಸುಂದರಿ ಕಿರೀಟವನ್ನು ಗೆಲ್ಲುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಸೋಮವಾರ, 23 ಸೆಪ್ಟೆಂಬರ್ 2024
12:28 ಅಪರಾಹ್ನ
Daily PDF
’ಮಿಸ್ ಯೂನಿವರ್ಸ್ ಇಂಡಿಯಾ 2024′ ಕಿರೀಟವನ್ನು ಮುಡಿಗೇರಿಸಿಕೊಂಡ ರಿಯಾ ಸಿಂಘಾ
Authored by:
Jyoti Angadi