* ಭಾರತದಲ್ಲಿ ಕೃಷಿ ಉತ್ಪಾದನೆಗೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳಿಗೆ ವಿಭಿನ್ನ ವೈಶಿಷ್ಟ್ಯಗಳಿವೆ. ಅದರಲ್ಲೂ ಮಿಜೋರಾಂ ರಾಜ್ಯವು ಇತ್ತೀಚಿನ ವರ್ಷಗಳಲ್ಲಿ ಶುಂಠಿ ಉತ್ಪಾದನೆಯಲ್ಲಿ ದೇಶದ ಮುಂಚೂಣಿ ರಾಜ್ಯಗಳಲ್ಲಿ ಒಂದಾಗಿ ಬೆಳೆಯುತ್ತಿದೆ. ಈ ಸಂದರ್ಭದಲ್ಲಿ ಮಿಜೋರಾಂವನ್ನು “ಭಾರತದ ಶುಂಠಿ ರಾಜಧಾನಿ” (India’s Ginger Capital) ಎಂದು ಘೋಷಿಸುವ ಕುರಿತು ಮಹತ್ವದ ಚರ್ಚೆ ಪ್ರಾರಂಭವಾಗಿದೆ.
* ದಿಲ್ಲಿಯಲ್ಲಿ ನಡೆದ ಒಂದು ಮಹತ್ವದ ಸಭೆಯಲ್ಲಿ ಮಿಜೋರಾಂ ರಾಜ್ಯದ ಪ್ರತಿನಿಧಿಗಳು ತಮ್ಮ ಕೃಷಿ ಉತ್ಪಾದನೆಗೆ ಸಂಬಂಧಿಸಿದ ಅಂಕಿಅಂಶಗಳನ್ನು ಮಂಡಿಸಿದರು.
ಅವರು ಕೇಂದ್ರ ಸರ್ಕಾರಕ್ಕೆ, ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಶುಂಠಿ ಬೆಳೆ ಉತ್ಪಾದನೆಯಾಗುತ್ತಿದೆ, ಮಿಜೋರಾಂ ಶುಂಠಿಯ ಗುಣಮಟ್ಟ ಅತ್ಯುತ್ತಮ, ದೇಶದ ಒಳನಾಡು ಮಾರುಕಟ್ಟೆಗೆ ಹಾಗೂ ವಿದೇಶಗಳಿಗೆ ಸಹ ಮಿಜೋರಾಂ ದೊಡ್ಡ ಪ್ರಮಾಣದಲ್ಲಿ ಶುಂಠಿ ಪೂರೈಸುತ್ತಿದೆ ಎಂದು ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಮಿಜೋರಾಂ ರಾಜ್ಯವನ್ನು ‘ಭಾರತದ ಶುಂಠಿ ರಾಜಧಾನಿ’ ಎಂದು ಅಧಿಕೃತವಾಗಿ ಪರಿಗಣಿಸುವಂತೆ ಕೇಂದ್ರಕ್ಕೆ ಶಿಫಾರಸು ಸಲ್ಲಿಸಲಾಯಿತು.
* ಮಿಜೋರಾಂ ರಾಜ್ಯದ ಸಹಜ ಭೌಗೋಳಿಕ ಪರಿಸ್ಥಿತಿಗಳು ಶುಂಠಿ ಬೆಳೆಗೆ ಅತ್ಯಂತ ಅನುಕೂಲಕರವಾಗಿವೆ. ಬೆಟ್ಟ ಪ್ರದೇಶಗಳು ಮತ್ತು ಹವಾಮಾನವು ಶುಂಠಿ ಬೆಳೆಗೆ ಸೂಕ್ತ.ಮಹತ್ತರ ಪ್ರಮಾಣದಲ್ಲಿ ಸಸ್ಯಸಾರ ಮಣ್ಣಿನ ಲಭ್ಯತೆ. ರೈತರು ಜೈವಿಕ ವಿಧಾನಗಳಲ್ಲಿ (Organic Cultivation) ಶುಂಠಿಯನ್ನು ಬೆಳೆಸುತ್ತಾರೆ. ಗುಣಮಟ್ಟ ಉತ್ತಮವಾಗಿರುವುದರಿಂದ ಮಿಜೋರಾಂ ಶುಂಠಿಗೆ ಬೇಡಿಕೆ ಹೆಚ್ಚು. ಇವುಗಳ ಪರಿಣಾಮವಾಗಿ ಮಿಜೋರಾಂ ರಾಜ್ಯವು ಕಳೆದ ಕೆಲವು ವರ್ಷಗಳಲ್ಲಿ ದೇಶದ ಅಗ್ರ ಶುಂಠಿ ಉತ್ಪಾದಕ ರಾಜ್ಯಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ.
Test Your Knowledge!
Attempt daily current affairs quizzes to boost your exam readiness.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.