* ಏಷ್ಯನ್ ಕ್ರೀಡಾಕೂಟದ ಮಹಿಳೆಯರ ಶಾಟ್‌ಪಟ್ ಸ್ಪರ್ಧೆಯಲ್ಲಿ ಕಿರಣ್ ಬಾಲಿಯಾನ್ ಅವರು 72 ವರ್ಷಗಳ ಬಿಡುವಿನ ಬಳಿಕ ಭಾರತಕ್ಕೆ ಪದಕ ತಂದುಕೊಟ್ಟ ಸಾಧನೆ ಮಾಡಿದರು.
* ಸೆಪ್ಟೆಂಬರ್ 29 ಶುಕ್ರವಾರರಂದು ನಡೆದ ಸ್ಪರ್ಧೆಯಲ್ಲಿ ಕಿರಣ್ ಬಾಲಿಯಾನ್ ಅವರು ಕಬ್ಬಿಣದ ಗುಂಡನ್ನು 17.36 ಮೀ. ಎಸೆದು ಈ ಮೂಲಕ ಭಾರತದ ಪದಕ ಬೇಟೆಗೆ ಚಾಲನೆ ನೀಡಿದ್ದಾರೆ.
* ಏಷ್ಯನ್ ಗೇಮ್ಸ್ನ ಮಹಿಳೆಯರ ಶಾಟ್‌ಪಟ್‌ನಲ್ಲಿ ಪದಕ ಗೆದ್ದ ಭಾರತದ ಎರಡನೇ ಕ್ರೀಡಾಪಟು ಎಂಬ ಗೌರವ 24 ವರ್ಷದ ಕಿರಣ್‌ಗೆ ಒಲಿಯಿತು. 1951ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಚೊಚ್ಚಲ ಕೂಟದಲ್ಲಿ ಬಾರ್ಬರಾ ವೆಬ್‌ಸ್ಟರ್ ಅವರು ಕಂಚು ಗೆದ್ದಿದ್ದರು.
* ಕಿರಣ್ ಅವರ ವೈಯಕ್ತಿಕ ಶ್ರೇಷ್ಠ ಪ್ರದರ್ಶನ 17.92 ಮೀ. ಆಗಿದೆ. ಸೆ.10 ರಂದು ಚಂಡೀಗಡದಲ್ಲಿ ನಡೆದಿದ್ದ ಇಂಡಿಯನ್ ಗ್ಯಾನ್ ಪ್ರಿ ಕೂಟದಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿತ್ತು.
ಶನಿವಾರ, 30 ಸೆಪ್ಟೆಂಬರ್ 2023
9:19 ಅಪರಾಹ್ನ
Daily PDF
ಮಹಿಳೆಯರ ಶಾಟ್‌ಪಟ್ ಸ್ಪರ್ಧೆಯಲ್ಲಿ ಕಿರಣ್‌ಗೆ ಶಾಟ್‌ಪಟ್ ಕಂಚು
Authored by:
Bhagya R K