* ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಡಿಸೆಂಬರ್ 09 ರಂದು (ಸೋಮವಾರ) ಬಿಮಾ ಸಖಿ ಯೋಜನೆಗೆ ಚಾಲನೆ ನೀಡಿದರು, ಇದು ಸರ್ಕಾರಿ ಸ್ವಾಮ್ಯದ ಜೀವ ವಿಮಾ ನಿಗಮದ (ಎಲ್‌ಐಸಿ) ಉಪಕ್ರಮವಾಗಿದ್ದು, ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು 12 ತಿಂಗಳಲ್ಲಿ 100,000 ಬಿಮಾ ಸಖಿಗಳನ್ನು ನೋಂದಾಯಿಸುವ ಗುರಿಯನ್ನು ಹೊಂದಿದೆ.
* ಈ ಯೋಜನೆಯಡಿ ಮಹಿಳೆಯರಿಗೆ ಎಲ್‌ಐಸಿ ಏಜೆಂಟ್ ಆಗಲು ತರಬೇತಿ ನೀಡಲಾಗುವುದು. ಈ ಅವಧಿಯಲ್ಲಿ ಪ್ರತಿ ತಿಂಗಳು 7 ಸಾವಿರದಿಂದ 5 ಸಾವಿರ ರೂಪಾಯಿ ನೀಡಲಾಗುವುದು. ಇದಲ್ಲದೇ ಪಾಲಿಸಿ ಪಡೆದ ಮೇಲೆ ಕಮಿಷನ್ ಕೂಡ ನೀಡಲಾಗುವುದು.
* ತರಬೇತಿ ಅವಧಿ ಮೂರು ವರ್ಷ ಇರುತ್ತದೆ. ಮೊದಲ ವರ್ಷದಂದು ತಿಂಗಳಿಗೆ 7,000 ರೂ ಸ್ಟೈಪೆಂಡ್ ನೀಡಲಾಗುತ್ತದೆ. ಎರಡನೇ ವರ್ಷದಲ್ಲಿ 6,000 ರೂ ಸ್ಟೈಪೆಂಡ್ ನೀಡಲಾಗುತ್ತದೆ. ಮೂರನೇ ವರ್ಷದಲ್ಲಿ 5,000 ರೂ ಮಾಸಿಕ ಸ್ಟೈಪೆಂಡ್ ನಿಡಲಾಗುತ್ತದೆ. ಮೂರನೇ ವರ್ಷದ ತರಬೇತಿ ವೇಳೆ ನಿಗದಿತ ಗುರಿಯಷ್ಟು ಪಾಲಿಸಿಗಳನ್ನು ಮಾರುವ ಅಭ್ಯರ್ಥಿಗಳಿಗೆ ಕಮಿಷನ್ ಕೂಡ ಸಿಗುತ್ತದೆ.
* 10 ನೇ ತರಗತಿ ಉತ್ತೀರ್ಣರಾಗಿರುವ 18-70 ವರ್ಷ ವಯಸ್ಸಿನ ಮಹಿಳೆಯರಿಗೆ ಅನುಕೂಲವಾಗುವಂತೆ ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.
* “ವಿಮಾ ವಲಯದ ವಿಸ್ತರಣೆಯನ್ನು ಯೋಜನೆಯ ಮೂಲಕ ಮಹಿಳೆಯರು ಮುನ್ನಡೆಸುತ್ತಾರೆ. ಎಲ್‌ಐಸಿ ಏಜೆಂಟ್‌ಗಳು ತಿಂಗಳಿಗೆ ಸರಾಸರಿ 15,000 ರೂಪಾಯಿಗಳವರೆಗೆ ಗಳಿಸುತ್ತಾರೆ ಎಂದು ಡೇಟಾ ಸೂಚಿಸುತ್ತದೆ" ಎಂದು ಪಾಣಿಪತ್‌ನಲ್ಲಿ ಯೋಜನೆಯನ್ನು ಉದ್ಘಾಟಿಸಿದ ಮೋದಿ ಅವರು ತಿಳಿಸಿದರು.
* ಪ್ರತಿ ಮನೆಗೂ ಸಾಮಾಜಿಕ ಭದ್ರತೆ ಒದಗಿಸುವಲ್ಲಿ ಈ ಯೋಜನೆ ಪ್ರಮುಖ ಪಾತ್ರ ವಹಿಸಲಿದೆ ಎಂದು ಮೋದಿ ಅವರು ಹೇಳಿದರು.
* ವಿಮಾ ಸಖಿ ಯೋಜನೆ ಖರ್ಚಿನ ಐದು ಪಟ್ಟು ಹೊಸ ವ್ಯವಹಾರವನ್ನು ಗಳಿಸುವ ನಿರೀಕ್ಷೆಯಿದೆ. ಈ ಯೋಜನೆಗೆ 840 ರೂ ಕೋಟಿ ವ್ಯಯಿಸಲಾಗುವುದು. ಮೊದಲ ವರ್ಷದಲ್ಲಿ 4 ರೂ ಸಾವಿರ ಕೋಟಿ ಹೊಸ ವ್ಯವಹಾರವನ್ನು ತರಬಹುದು ಎಂದು ನಿರೀಕ್ಷಿಸಿದ್ದೇವೆ. ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ಬಿಮಾ ಸಖಿಯನ್ನು ನೇಮಿಸುವ ಯೋಜನೆ ಇದೆ ಎಂದರು.
ಮಂಗಳವಾರ, 10 ಡಿಸೆಂಬರ್ 2024
10:58 ಪೂರ್ವಾಹ್ನ
Daily PDF
ಮಹಿಳೆಯರ ಸಬಲೀಕರಣಕ್ಕಾಗಿ ‘LIC ಬಿಮಾ ಸಖಿ ಯೋಜನೆ’ಗೆ ‘ಪ್ರಧಾನಿ ಮೋದಿ’ ಚಾಲನೆ
Authored by:
Bhagya R K