* ಭಾರತೀಯ ಜೀವ ವಿಮಾ ನಿಗಮ (LIC) ಮಹಿಳೆಯರ ಸಬಲೀಕರಣವನ್ನು ಉದ್ದೇಶಿಸಿ "ಎಲ್‌ಐಸಿ ಭೀಮಾ ಸಖಿ" ಎಂಬ ವಿಶಿಷ್ಟ ಯೋಜನೆಯನ್ನು ಆರಂಭಿಸಿದೆ.
* ಈ ಯೋಜನೆಯ ಮುಖ್ಯ ಉದ್ದೇಶ ಮಹಿಳೆಯರಿಗೆ ಸ್ಥಿರ ಆದಾಯದ ಜೊತೆಗೆ ವಿಮಾ ಜಾಗೃತಿ ಹಾಗೂ ವ್ಯಾಪ್ತಿಯಲ್ಲಿ ಸಕ್ರಿಯ ಪಾತ್ರವಹಿಸಲು ಅವಕಾಶ ಕಲ್ಪಿಸುವುದಾಗಿದೆ.
* ಈ ಯೋಜನೆಯಡಿ ಮಹಿಳಾ ಏಜೆಂಟ್‌ಗಳು ಮೊದಲ ಮೂರು ವರ್ಷಗಳ ಕಾಲ ಕಾರ್ಯಕ್ಷಮತೆಯ ಆಧಾರದ ಮೇಲೆ ಮಾಸಿಕ ವೇತನ ಪಡೆಯಲು ಅರ್ಹರಾಗಿರುತ್ತಾರೆ.
* ಮೊದಲ ವರ್ಷದಲ್ಲಿ ₹7,000 ನಿಗದಿತ ವೇತನ ಸಿಗುತ್ತದೆ. ಎರಡನೇ ವರ್ಷದಲ್ಲಿ, ಮೊದಲ ವರ್ಷದ ಪಾಲಿಸಿಗಳಲ್ಲಿ ಕನಿಷ್ಠ 65% ಇನ್‌ಫೋರ್ಸ್ ಆಗಿದ್ದರೆ ₹6,000 ಸಿಗುತ್ತದೆ. ಮೂರನೇ ವರ್ಷದಲ್ಲಿ, 75% ಪಾಲಿಸಿಗಳು ಇನ್‌ಫೋರ್ಸ್ ಆಗಿದ್ದರೆ ₹5,000 ವೇತನ ಸಿಗುತ್ತದೆ.
* ಈ ಯೋಜನೆಗೆ ಈಗಾಗಲೇ LIC ಏಜೆಂಟ್ ಆಗಿರುವವರು, LIC ನೌಕರರು ಹಾಗೂ ಅವರ ಕುಟುಂಬ ಸದಸ್ಯರು, ನಿವೃತ್ತ ನೌಕರರು ಮತ್ತು ಹಿಂದಿನ ಏಜೆಂಟ್‌ಗಳು ಅರ್ಹರಲ್ಲ.
* ಅರ್ಜಿ ಸಲ್ಲಿಸಲು ಕನಿಷ್ಠ 18 ಮತ್ತು ಗರಿಷ್ಠ 70 ವರ್ಷದ ವಯಸ್ಸಿರಬೇಕು. ಅರ್ಹತೆಗಾಗಿ ಕನಿಷ್ಠ 10ನೇ ತರಗತಿ ಪಾಸಾಗಿರಬೇಕು.
* ಅರ್ಜೆ ಸಲ್ಲಿಸಲು ವಯಸ್ಸು, ವಿಳಾಸ ಮತ್ತು ವಿದ್ಯಾರ್ಹತೆಯ ಪ್ರೂಫುಗಳ ಸ್ವ-ಅಧಿಸೂಚಿತ ಪ್ರತಿಗಳು ಹಾಗೂ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ ಅಗತ್ಯವಿರುತ್ತದೆ. ಆಯ್ಕೆಗೊಂಡ ಮಹಿಳೆಯರಿಗೆ LIC ತರಬೇತಿ, ಮಾರ್ಕೆಟಿಂಗ್ ಸಾಮಗ್ರಿಗಳು ಮತ್ತು ಪ್ರಚಾರ ಬೆಂಬಲವನ್ನು ನೀಡುತ್ತದೆ.
ಮಹಿಳಾ ಸಬಲೀಕರಣಕ್ಕೆ 'ಎಲ್‌ಐಸಿ ಬಿಮಾ ಸಖಿ' ಯೋಜನೆ ಆರಂಭ
Published by Jyoti Angadi
01 ಆಗಸ್ಟ್ 2025