* ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಹಿಳಾ ಕ್ರೀಡೆಗಳಲ್ಲಿ ತೃತೀಯಲಿಂಗಿ ಕ್ರೀಡಾಪಟುಗಳ ಭಾಗವಹಿಸುವಿಕೆಯನ್ನು ನಿಷೇಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ.
* ಅಮೆರಿಕಾ ದೇಶದಲ್ಲಿ ರಾಷ್ಟ್ರೀಯ ಬಾಲಕಿಯರು ಮತ್ತು ಮಹಿಳಾ ಕ್ರೀಡಾ ದಿನವನ್ನು ಆಚರಿಸಲಾಗುತ್ತಿರುವ ಸಮಯದಲ್ಲಿ ಇಂತಹ ಮಹತ್ವದ ಆದೇಶ ಜಾರಿಗೆ ಬಂದಿದೆ.
* "ನಾವು ಮಹಿಳಾ ಕ್ರೀಡಾಪಟುಗಳ ವೈಭವದ ಪರಂಪರೆಯನ್ನು ರಕ್ಷಿಸುತ್ತೇವೆ ಮತ್ತು ಪುರುಷರು ನಮ್ಮ ಮಹಿಳೆಯರು ಮತ್ತು ಹುಡುಗಿಯರನ್ನು ಗಾಯಗೊಳಿಸಲು ಮತ್ತು ವಂಚಿಸಲು ನಾವು ಅನುಮತಿಸುವುದಿಲ್ಲ. ಈಗ ಮಹಿಳೆಯರ ಕ್ರೀಡೆಗಳು ಕೇವಲ ಮಹಿಳೆಯರಿಗೆ ಮಾತ್ರ. ಮಹಿಳಾ ವಿಭಾಗದಲ್ಲಿ ಟ್ರಾನ್ಸ್‌ಜೆಂಡರ್‌ಗಳ ಪ್ರವೇಶ ನಿಷೇಧ" ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. "ನಾವು ಮಹಿಳಾ ಕ್ರೀಡಾಪಟುಗಳ ವೈಭವದ ಪರಂಪರೆಯನ್ನು ರಕ್ಷಿಸುತ್ತೇವೆ" ಎಂದು ಒತ್ತಿ ಹೇಳಿದರು.
* ಟ್ರಾನ್ಸ್‌ಜೆಂಡರ್ ಕ್ರೀಡಾಪಟುಗಳು ಅಮೆರಿಕದ ಕ್ರೀಡಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಕ್ಯಾಟ್ಲಿನ್ ಜೆನ್ನರ್ (ಹಿಂದಿನ ಬ್ರೂಸ್ ಜೆನ್ನರ್) 1976ರ ಒಲಿಂಪಿಕ್ಸ್‌ನಲ್ಲಿ ಡೆಕಾಥ್ಲಾನ್ ಚಿನ್ನ ಗೆದ್ದಿದ್ದರು.
* ಲಿಯಾ ಥಾಮಸ್ 2022ರಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್ ಗೆದ್ದು ಇತಿಹಾಸ ನಿರ್ಮಿಸಿದರು. ಆದರೆ ಡೊನಾಲ್ಡ್ ಟ್ರಂಪ್ ಅವರ ಹೊಸ ನೀತಿಯ ನಂತರ ಟ್ರಾನ್ಸ್‌ಜೆಂಡರ್ ಮಹಿಳೆಯರಿಗೆ ಮಹಿಳಾ ಕ್ರೀಡೆಗಳಲ್ಲಿ ಭಾಗವಹಿಸಲು ನಿಷೇಧ ವಿಧಿಸಲಾಗಿದೆ.
ಮಹಿಳಾ ಕ್ರೀಡೆಯಲ್ಲಿ ತೃತೀಯಲಿಂಗಿಗಳಿಗೆ ನಿಷೇಧ ಹೇರಿದ ಡೊನಾಲ್ಡ್ ಟ್ರಂಪ್
Published by Jyoti Angadi
07 ಫೆಬ್ರವರಿ 2025