* ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಮೊಮ್ಮಗಳಾದ ಅನನ್ಯಾ ಪ್ರಸಾದ್ ಅವರು ಅಟ್ಲಾಂಟಿಕ್ ಸಾಗರವನ್ನು ಏಕಾಂಗಿಯಾಗಿ ವಿಶ್ವದ ಅತ್ಯಂತ ಕಠಿಣ ರೋಯಿಂಗ್ ರೇಸ್‌ನ ಸೋಲೋ ವಿಭಾಗದಲ್ಲಿ ಕ್ರಮಿಸಿ ಮೂಲಕ ಹೊಸ ಇತಿಹಾಸ ರಚಿಸಿದ್ದಾರೆ.
* ಕಳೆದ ಡಿಸೆಂಬರ್ 12ರಂದು ಸ್ಪೇನ್ ಸಮೀಪದ ಲಾ ಗೊಮೆರಾ ಎಂಬ ದ್ವೀಪದಿಂದ ಈ ಮಹಾಯಾನ ಆರಂಭಿಸಿ, ಫೆಬ್ರುವರಿ.1ರಂದು ಯಾನ ಪೂರ್ಣಗೊಳಿಸಿದ್ದಾರೆ.
* 52 ದಿನ 5 ಗಂಟೆ, 44 ನಿಮಿಷದಲ್ಲಿ ಅವರು 4800 ಕಿ.ಮೀಗಳ ದೂರವನ್ನು ಕ್ರಮಿಸಿದ್ದಾರೆ. ಈ ಮೂಲಕ ಇಂಥ ಸಾಧನೆ ಮಾಡಿದ ಮೊದಲ ಶ್ವೇತವರ್ಣೀಯೇತರ ಮಹಿಳೆ ಮತ್ತು ಮೊದಲ ಭಾರತೀಯ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
* ಈ ಯಾನಕ್ಕಾಗಿಯೇ ಕಠಿಣ ಶ್ರಮ ವಹಿಸಿದ್ದರು. ಅದಕ್ಕಾಗಿಯೇ 25 ಅಡಿ ಅಳತೆಯ ಬೋಟ್ ತಯಾರಿಸಿದ್ದರು. ಅಲ್ಲದೇ ಬೋಟ್ ರಿಪೇರಿಯನ್ನು ಸಹ ಕಲಿತಿದ್ದರು. ಅದಕ್ಕಾಗಿಯೇ ಅವರು ನಿತ್ಯ ಸುಮಾರು 50 ಮೈಲಿಗಳಷ್ಟು ರೋಯಿಂಗ್ ಮಾಡಿದ್ದರು.
ಶನಿವಾರ, 15 ಫೆಬ್ರುವರಿ 2025
3:38 ಅಪರಾಹ್ನ
Daily PDF
ಮಹಾ ಸಮುದ್ರಯಾನ : ಏಕಾಂಗಿಯಾಗಿ ಅಟ್ಲಾಂಟಿಕ್ ಸಾಗರ ದಾಟಿದ ಅನನ್ಯಾ
Authored by:
Jyoti Angadi