* ಉತ್ತರಪ್ರದೇಶದಲ್ಲಿ ಕುಂಭಮೇಳದ ವೇಳೆ ಆದಿತ್ಯನಾಥ್ ಅವರು 'ಕುಂಭವಾಣಿ' ಎಂಬ ಎಫ್‌ಎಂ ಚಾನೆಲ್ (103.5) ಅನ್ನು ಉದ್ಘಾಟಿಸಿದ್ದಾರೆ.
* ಕುಂಭಮೇಳದಲ್ಲಿ ಭಾಗಿಯಾಗಲು ಸಾಧ್ಯವಿರದ ಭಕ್ತರಿಗೆ ಕುಂಭಮೇಳದ ಬಗ್ಗೆ ತಿಳಿಯಲು ಇದು ನೆರವಾಗಲಿದೆ.
* 2025ರ ಫೆಬ್ರವರಿ 26ರವರೆಗೆ, ಬೆಳಗ್ಗೆ 5.55 ರಿಂದ ರಾತ್ರಿ 10.5 ರವರೆಗೆ ಎಫ್‌ಎಂ ಪ್ರಸಾರವಾಗುತ್ತದೆ. ಜನವರಿ 29 ಮತ್ತು ಫೆಬ್ರವರಿ 3ರಂದು ಪ್ರಮುಖ ಸ್ನಾನದ ಆಚರಣೆಗಳ ಕುರಿತು ಮಾಹಿತಿ ನೀಡಲಾಗುತ್ತದೆ.
* ಕುಂಭವಾಣಿಯು ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುವ 'ಶಿವ ಮಹಿಮಾ' ಎಂಬ ವಿಶೇಷ ಸ್ತುತಿಯನ್ನೂ ಪ್ರಸ್ತುತಿ ಪಡಿಸಲಿದೆ.
* ಬೆಳಗ್ಗೆ 9ರಿಂದ 10 ಗಂಟೆವರೆಗೆ ನಮಸ್ಕಾರ ಪ್ರಯಾಗ್ ರಾಜ್, ಸಂಜೆ 4.30ರಿಂದ 5.30ರವರೆಗೆ ವಿವಿಧ ಟಾಕ್ ಶೋಗಳನ್ನು ಪ್ರಸಾರ ಮಾಡಲಾಗುತ್ತದೆ. ಇದು ಕೇಳುಗರಿಗೆ ಸಾಂಸ್ಕೃತಿಕ ಅನುಭವವನ್ನು ನೀಡುತ್ತದೆ.
ಮಹಾ ಕುಂಭಕ್ಕೆ ಮೀಸಲಾದ 'ಕುಂಭವಾಣಿ' FM ಚಾನೆಲ್ ಆರಂಭ
Published by Jyoti Angadi
15 ಜನವರಿ 2025