* 'ಮೆಟಾ ಎಐ' ಈಗ ಹಿಂದಿ ಸೇರಿದಂತೆ ಏಳು ಭಾಷೆಗಳಲ್ಲಿ ಲಭ್ಯವಿದೆ ಎಂದು ಸಾಮಾಜಿಕ ಮಾಧ್ಯಮ ದಿಗ್ಗಜ ಕಂಪನಿ ಮೆಟಾ ತಿಳಿಸಿದೆ.
* ಇದರೊಂದಿಗೆ ಕೃತಕ ಬುದ್ಧಿಮತ್ತೆಯ (ಎಐ) ಆಧಾರಿತವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಕ್ಷೇತ್ರದತ್ತ ಮೆಟಾ ತನ್ನ ಸಾನಿಧ್ಯವನ್ನು ಮತ್ತಷ್ಟು ವಿಸ್ತರಿಸಿದೆ.
* ಸಾಮಾಜಿಕ ಮಾಧ್ಯಮಗಳಾದ ವಾಟ್ಸ್‌ಆಯಪ್, ಇನ್‌ಸ್ಟಾಗ್ರಾಮ್, ಮೆಸೆಂಜರ್ ಮತ್ತು ಫೇಸ್‌ಬುಕ್ ವೇದಿಕೆಗಳಲ್ಲಿ ಮೆಟಾ ಎಐ ಸೌಲಭ್ಯ ಬಳಕೆದಾರರಿಗೆ ಲಭ್ಯವಾಗಲಿದೆ.
* ಇಂಗ್ಲಿಷ್, ಹಿಂದಿ, ಫ್ರೆಂಚ್, ಜರ್ಮನ್, ಇಟಲಿಯನ್, ಪೋರ್ಚುಗೀಸ್ ಮತ್ತು ಸ್ಪ್ಯಾನಿಶ್ ಭಾಷೆಗಳಲ್ಲಿ ಮೆಟಾ ಎಐ ಲಭ್ಯವಿರುತ್ತದೆ ಎಂದು ಕ್ಯಾಲಿಫೋರ್ನಿಯಾ ಮೂಲದ ಕಂಪನಿ ತಿಳಿಸಿದೆ.
* ಇದರೊಂದಿಗೆ ಮೆಟಾ ಎಐ ಈಗ 22 ರಾಷ್ಟ್ರಗಳಲ್ಲಿ ಲಭ್ಯವಾಗಿದೆ. ಹೊಸದಾಗಿ ಅರ್ಜೆಂಟೀನಾ, ಚಿಲಿ, ಕೊಲಂಬಿಯಾ, ಈಕ್ವಾಡಾರ್, ಮೆಕ್ಸಿಕೊ, ಪೆರು ಮತ್ತು ಕ್ಯಾಮರಾನ್ ಸೇರ್ಪಡೆಗೊಂಡಿದೆ ಎಂದು ತಿಳಿಸಿದೆ.
* ಬಹುಭಾಷಾ ಸಾಮರ್ಥ್ಯಗಳ ವಿಶಾಲ ವ್ಯಾಪ್ತಿಯು ಎಂದರೆ ಬಳಕೆದಾರರು ಈಗ ಹಿಂದಿಯಲ್ಲಿ ಗಣಿತ ಮತ್ತು ಕೋಡಿಂಗ್‌ನಂತಹ ಹೆಚ್ಚು ಸಂಕೀರ್ಣ ಪ್ರಶ್ನೆಗಳಿಗೆ ಸಹಾಯಕ್ಕಾಗಿ ಸುಧಾರಿತ ಮೆಟಾ AI ಮಾದರಿಯನ್ನು ಟ್ಯಾಪ್ ಮಾಡಬಹುದು.
ಶುಕ್ರವಾರ, 26 ಜುಲೈ 2024
10:54 ಪೂರ್ವಾಹ್ನ
Daily PDF
Meta AI: ಹಿಂದಿ ಸೇರಿದಂತೆ 7 ಭಾಷೆಗಳಲ್ಲಿ ಲಭ್ಯ
Authored by:
Bhagya R K