* ಕುಟುಂಬಗಳ ಮೇಲೆ ಆಗುವ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ 15 ರಂದು ಅಂತಾರಾಷ್ಟ್ರೀಯ ಕುಟುಂಬಗಳ ದಿನವನ್ನಾಗಿ ಆಚರಿಸಲಾಗುತ್ತದೆ.
* ಅಂತಾರಾಷ್ಟ್ರೀಯ ಕುಟುಂಬ ದಿನದ 2025 ರ ಥೀಮ್ " ಸುಸ್ಥಿರ ಅಭಿವೃದ್ಧಿಗಾಗಿ ಕುಟುಂಬ-ಆಧಾರಿತ ನೀತಿಗಳು: ಸಾಮಾಜಿಕ ಅಭಿವೃದ್ಧಿಗಾಗಿ ಎರಡನೇ ವಿಶ್ವ ಶೃಂಗಸಭೆಯ ಕಡೆಗೆ" ಎಂಬುದು ಥೀಮ್ ಆಗಿದೆ.
* ವಿಶ್ವಸಂಸ್ಥೆ 1993ರ ಸಾಮಾನ್ಯ ಸಭೆಯಲ್ಲಿ ಈ ದಿನಾಚರಣೆಯನ್ನು ಘೋಷಿಸಿತು .1994 ರಿಂದ ಈ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ.
* ಸಾಮಾಜಿಕ, ಆರ್ಥಿಕ ಜನಸಂಖ್ಯೆ ಬೆಳವಣಿಗೆಯಿಂದ ಸಮುದಾಯದ ಮೂಲ ಘಟಕವಾದ ಕುಟುಂಬಗಳ ಮೇಲೆ ಆಗುವ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ 15 ರಂದು ಈ ದಿನವನ್ನು ಆಚರಿಸಲಾಗುತ್ತದೆ.
* ಕುಟುಂಬದ ಸಮಸ್ಯೆಗಳ ಅರಿವನ್ನು ಉತ್ತೇಜಿಸಲು, ಕುಟುಂಬಗಳ ಮೇಲೆ ಪರಿಣಾಮ ಬೀರುವ ಸಾಮಾಜಿಕ, ಆರ್ಥಿಕ ಮತ್ತು ಜನಸಂಖ್ಯಾ ಪ್ರಕ್ರಿಯೆಗಳ ಜ್ಞಾನವನ್ನು ಹೆಚ್ಚಿಸಲು ಮತ್ತು ಎಲ್ಲಾ ರೀತಿಯ ಕುಟುಂಬಗಳನ್ನು ಆಚರಿಸಲು ಅವರ ವೈವಿಧ್ಯತೆಯನ್ನು ಅಂಗೀಕರಿಸುವ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಈ ದಿನ ಹೊಂದಿದೆ.
* ಸಾಮಾಜಿಕ ಅಭಿವೃದ್ಧಿ ಆಯೋಗ ಹಾಗೂ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯು ಮಂಡಿಸಿದ ಶಿಫಾರಸುಗಳ ಆಧಾರದ ಮೇಲೆ 1983 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಪ್ರತಿ ವರ್ಷ ಮೇ 15 ಅನ್ನು ಅಂತರರಾಷ್ಟ್ರೀಯ ಕುಟುಂಬಗಳ ದಿನವೆಂದು ಗೊತ್ತುಪಡಿಸುವ ನಿರ್ಣಯವನ್ನು ಅಂಗೀಕರಿಸಿತು.
* ಸಾಮಾಜಿಕ ಪ್ರಗತಿ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ವಿಶ್ವಾದ್ಯಂತದ ಉಪಕ್ರಮಗಳ ಭಾಗವಾಗಿ ಅಂತರರಾಷ್ಟ್ರೀಯ ಕುಟುಂಬ ದಿನವು ಕೌಟುಂಬಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಸಮಾಜದಲ್ಲಿ ಅವರ ಸ್ಥಾನಮಾನ ಮತ್ತು ಯೋಗಕ್ಷೇಮವನ್ನು ಹೆಚ್ಚಿಸಲು ಮತ್ತು ಅಂತರರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ.
ಗುರುವಾರ, 15 ಮೇ 2025
10:52 ಪೂರ್ವಾಹ್ನ
Daily PDF
ಮೇ 15 ಅಂತಾರಾಷ್ಟ್ರೀಯ ಕುಟುಂಬ ದಿನ
Authored by:
Bhagya R K