* ದ್ವೀಪ ರಾಷ್ಟ್ರ ಮಾಲ್ಡೀವ್ಸ್ ನಲ್ಲಿ ನೆಲೆಗೊಂಡಿರುವ ಭಾರತೀಯ ಸೇನೆಯ ಮೊದಲ ತಂಡವನ್ನು ಮಾರ್ಚ್ 10ರೊಳಗೆ ದೇಶದಿಂದ ವಾಪಸ್ ಕಳುಹಿಸಲಾಗುವುದು' ಎಂದು ಮಾಲ್ಡೀವ್ ನ ಅಧ್ಯಕ್ಷರಾದ ಮೊಹಮ್ಮದ್ ಮುಯಿಜು ಅವರು ಫೆಬ್ರುವರಿ 05 ರಂದು (ಸೋಮವಾರ) ತಿಳಿಸಿದ್ದಾರೆ.
* 'ಪ್ರಸ್ತುತ ಎರಡು ವಾಯು ನೆಲೆಗಳ ನಿರ್ವಹಣೆ ನೋಡಿಕೊಳ್ಳುತ್ತಿರುವ ಉಳಿದೆರಡು ತಂಡಗಳನ್ನು ಮೇ 10ರೊಳಗೆ ಭಾರತಕ್ಕೆ ವಾಪಸ್ ಕಳುಹಿಸ-ಲಾಗುವುದು' ಎಂದು ಮೊಹಮ್ಮದ್ ಮುಯಿಜು ಅವರು ತಿಳಿಸಿದ್ದಾರೆ.
* 2023 ನವೆಂಬರ್ 17ರಂದು ಮಾಲ್ಡೀವ್ಸ್ ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊಹಮ್ಮದ್ ಮುಯಿಜು ಅವರು ಸೇನೆಯನ್ನು ಮಾರ್ಚ್ 15ರ ಒಳಗೆ ವಾಪಸ್ ಕರೆಸಿಕೊಳ್ಳುವಂತೆ ಭಾರತಕ್ಕೆ ಮನವಿ ಮಾಡಿದ್ದರು.
* ಮಾಲ್ಡೀವ್ ನ ಅಧ್ಯಕ್ಷರಾದ ಮೊಹಮ್ಮದ್ ಮುಯಿಜು ಅವರು ಮಾರ್ಚ್ 15 ರೊಳಗೆ ತನ್ನ ದೇಶದಿಂದ 88 ಮಿಲಿಟರಿ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುವಂತೆ ಭಾರತಕ್ಕೆ ಔಪಚಾರಿಕವಾಗಿ ವಿನಂತಿಸಿದರು.
* ಪ್ರಸ್ತುತ ಭಾರತೀಯ ಸೇನಾ ಸಿಬ್ಬಂದಿ ಪ್ರಾಥಮಿಕವಾಗಿ ಎರಡು ಹೆಲಿಕಾಪ್ಟರ್‌ಗಳು ಮತ್ತು ನೂರಾರು ವೈದ್ಯಕೀಯ ಸ್ಥಳಾಂತರಿಸುವಿಕೆ ಮತ್ತು ಮಾನವೀಯ ಕಾರ್ಯಾಚರಣೆಗಳನ್ನು ನಡೆಸಿದ ವಿಮಾನವನ್ನು ನಿರ್ವಹಿಸಲು ಭಾರತೀಯ ಸೇನಾ ಸಿಬ್ಬಂದಿ ಮಾಲ್ಡೀವ್ಸ್‌ನಲ್ಲಿದ್ದಾರೆ.
ಮೇ 10 ರೊಳಗೆ ಮಾಲ್ಡೀವ್ಸ್ ನಿಂದ ಭಾರತೀಯ ಸೇನೆ ವಾಪಾಸ್
Published by Bhagya R K
06 ಫೆಬ್ರವರಿ 2024