* 29 ವರ್ಷದ ದೃಷ್ಟಿಹೀನ ಮಹಿಳೆಯೋರ್ವರು ಜಗತ್ತಿನ ಅತಿ ಎತ್ತರದ ಶಿಖರವಾಗಿರುವ ಮೌಂಟ್ ಎವರೆಸ್ಟ್ ಏರುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಚಾಂಗೊ ಗ್ರಾಮದ ಚೊಂಜನ್ ಅಂಗ್ಮೋ ಅವರು ಮೌಂಟ್ ಎವರೆಸ್ಟ್ ಏರಿದ ಮೊದಲ ಅಂಧ ಮಹಿಳೆಯಾಗಿದ್ದಾರೆ.
* 8ನೇ ವಯಸ್ಸಿಗೆ ದೃಷ್ಟಿ ಕಳೆದುಕೊಂಡ ಚೊಂಜನ್, ವಿಶ್ವದ ಅತಿ ಎತ್ತರದ ಶಿಖರದ ಮೇಲೆ ವಿಜಯದ ಪತಾಕೆ ಹಾರಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
* ಮೇ 19, 2025ರಂದು ಬೆಳಗ್ಗೆ 8:30ಕ್ಕೆ ದಂಡು ಶೆರ್ಪಾ ಮತ್ತು ಗುರುಂಗ್ ಮೈಲಾ ಅವರೊಂದಿಗೆ ಮೌಂಟ್ ಎವರೆಸ್ಟ್ ಏರಿದ್ದಾರೆ.
* ಚಂಡೀಗಢದಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿರುವ ಚೊಂಜಿನ್ ಅವರಿಗೆ ದೆಹಲಿ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂಎ ಪದವಿ ಪಡೆದಿದ್ದಾರೆ. ಅವರಿಗೆ 2024ರಲ್ಲಿ ಕ್ಯಾವಿನ್‌ಕೇರ್ ಎಬಿಲಿಟಿ ಪ್ರಶಸ್ತಿ ದೊರೆತರೆ, 2024ರಲ್ಲಿ ಅಂಗವಿಕಲರ ಸಬಲೀಕರಣಕ್ಕಾಗಿ ರಾಷ್ಟ್ರಪತಿಗಳು ಗೌರವಿಸಿದ್ದಾರೆ.
ಮೌಂಟ್ ಎವರೆಸ್ಟ್ ಏರಿದ ಭಾರತದ ಮೊದಲ ಅಂಧ ಮಹಿಳೆ
Published by Bhagya R K
27 ಮೇ 2025