* ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಸರಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಕರ್ನಾಟಕ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
* ರಾಷ್ಟ್ರಕವಿ ಕುವೆಂಪು ಅವರು ರಚಿಸಿದ 'ಜೈ ಭಾರತ ಜನನಿಯ ತನುಜಾತೆ' ನಾಡಗೀತೆಯನ್ನು ವಿವಿಧ ಸಂಗೀತ ಸಂಯೋಜಕರು ವಿಭಿನ್ನ ಧಾಟಿಗಳಲ್ಲಿ ಸಂಯೋಜಿಸಿದ್ದಾರೆ.
* ಮೈಸೂರು ಅನಂತಸ್ವಾಮಿ ಅವರು ಧಾಟಿಯಲ್ಲಿ ಅಳವಡಿಸಿಕೊಂಡ ಯಾವುದೇ ಆಲಾಪ ಹಾಗೂ ಪುನರಾವರ್ತನೆ ಇಲ್ಲದಂತೆ 2.30 ನಿಮಿಷಗಳಲ್ಲಿ ನಾಡಗೀತೆಯನ್ನು ಹಾಡಬೇಕೆಂದು ರಾಜ್ಯ ಸರ್ಕಾರ 25 ಸೆಪ್ಟೆಂಬರ್ 2022 ರಲ್ಲಿ ಆದೇಶ ಹೊರಡಿಸಿತ್ತು.
* ಮೈಸೂರು ಅನಂತಸ್ವಾಮಿ ಅವರು ಸಂಯೋಜಿಸಿದ ಧಾಟಿಯನ್ನೇ ಎಲ್ಲಾ ಕಡೆ ಹಾಡಬೇಕು ಎಂದು ಕಡ್ಡಾಯಗೊಳಿಸಿ ರಾಜ್ಯ ಸರಕಾರ ಹೊರಡಿಸಿರುವ ಆದೇಶ ರದ್ದು ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿರುವ ಅರ್ಜಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ಏಪ್ರಿಲ್ 26 ರಂದು (ಶುಕ್ರವಾರ) ವಿಚಾರಣೆಗೆ ಬಂದಿತು.
ಮೈಸೂರು ಅನಂತಸ್ವಾಮಿ ಧಾಟಿ ನಾಡಗೀತೆಯೇ ಅಂತಿಮ
Published by Bhagya R K
25 ಏಪ್ರಿಲ್ 2024