➤ ಭಾರತೀಯ ವಾಯುಪಡೆಯ (IAF) ಮಾಧ್ಯಮ ಸಾರಿಗೆ ವಿಮಾನ (MTA) ಯೋಜನೆಯಡಿ, ಬ್ರೆಜಿಲ್ ಮೂಲದ ಪ್ರಸಿದ್ಧ ಏರೋಸ್ಪೇಸ್ ಸಂಸ್ಥೆ ಎಂಬ್ರೇರ್ (Embraer) ಮತ್ತು ಭಾರತದ ಮಹೀಂದ್ರಾ ಗ್ರೂಪ್ (Mahindra Group) ಜಂಟಿಯಾಗಿ 'C-390 ಮಿಲೇನೆನಿಯಮ್' (C-390 Millennium) ಯುದ್ಧ ವಿಮಾನ ತಯಾರಿಕಾ ಘಟಕವನ್ನು ಮಹಾರಾಷ್ಟ್ರದ ನಾಗಪುರದಲ್ಲಿ ಸ್ಥಾಪಿಸಲು ನಿರ್ಧರಿಸಿವೆ.
- ಸ್ಥಳ ಆಯ್ಕೆ: ಮಹಾರಾಷ್ಟ್ರ ಸರ್ಕಾರವು ಈ ಉದ್ಯಮಕ್ಕಾಗಿ ನಾಗಪುರದಲ್ಲಿ ಜಾಗವನ್ನು ಹಂಚಿಕೆ ಮಾಡಿದೆ.
- ವಿಮಾನದ ಮಾದರಿ: C-390 ಮಿಲೇನಿಯಮ್ (ಟ್ವಿನ್-ಎಂಜೈನ್, ಮಧ್ಯಮ ಶ್ರೇಣಿಯ ಸಾರಿಗೆ ವಿಮಾನ).
- ಉದ್ದೇಶ: ಭಾರತೀಯ ವಾಯುಪಡೆಯ ಹಳೆಯ ಆಂಟೊನೊವ್ An-32 (Antonov An-32) ವಿಮಾನಗಳ ಪಡೆಯನ್ನು ಬದಲಾಯಿಸಲು 60 ರಿಂದ 80 ಹೊಸ ವಿಮಾನಗಳ ಅಗತ್ಯವಿದೆ.
- ಸಹಕಾರ ಒಪ್ಪಂದ: ಮಹೀಂದ್ರಾ ಮತ್ತು ಎಂಬ್ರೇರ್ ಸಂಸ್ಥೆಗಳು ಫೆಬ್ರವರಿ 2024 ರಲ್ಲಿ ಪ್ರಾಥಮಿಕ ಒಪ್ಪಂದ (MoU) ಮಾಡಿಕೊಂಡಿದ್ದು, ಅಕ್ಟೋಬರ್ 2025 ರಲ್ಲಿ ಆಯಕಟ್ಟಿನ ಒಪ್ಪಂದಕ್ಕೆ ಅಂಕಿತ ಹಾಕಿದ್ದವು.
➤ C-390 ಮಿಲೇನಿಯಮ್ ವಿಮಾನದ ತಾಂತ್ರಿಕ ವಿಶೇಷತೆಗಳು
- ಉತ್ಪಾದಕ ಸಂಸ್ಥೆ: ಎಂಬ್ರೇರ್ (ಬ್ರೆಜಿಲ್)
- ಸಾಗಣೆ ಸಾಮರ್ಥ್ಯ (Payload): ಗರಿಷ್ಠ 26 ಟನ್ಗಳು
- ಪ್ರಮುಖ ಕಾರ್ಯಗಳು: ಸೇನಾ ಪಡೆಗಳ ರವಾನೆ, ಸರಕು ಸಾಗಣೆ, ವೈದ್ಯಕೀಯ ತುರ್ತು ಸೇವೆ, ಅಗ್ನಿಶಾಮಕ ಕಾರ್ಯಾಚರಣೆ
- ವಿಶೇಷತೆ: ಕಚ್ಚಾ ಅಥವಾ ತಾತ್ಕಾಲಿಕ ರನ್ವೇಗಳಲ್ಲೂ ಇಳಿಯುವ ಹಾಗೂ ಟೇಕ್-ಆಫ್ ಆಗುವ ಸಾಮರ್ಥ್ಯ
➤ MRO ಸೌಲಭ್ಯ: ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರಿಶೀಲನೆ (Maintenance, Repair, and Overhaul) ಕೇಂದ್ರಗಳನ್ನು ಭಾರತದಲ್ಲೇ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ.
➤ ನಾಗಪುರದ ಕಾರ್ಯತಂತ್ರ: ಭಾರತದ ಮಧ್ಯಭಾಗದಲ್ಲಿರುವ ನಾಗಪುರ ಈಗಾಗಲೇ ಪ್ರಮುಖ ವಿಮಾನಯಾನ ಮತ್ತು ರಕ್ಷಣಾ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುತ್ತಿದೆ.
C-390 ಮಿಲಿಟರಿ ವಿಮಾನ ಜೋಡಣೆ ಘಟಕಕ್ಕೆ ನಾಗಪುರ ಆಯ್ಕೆ: ಮಹೀಂದ್ರಾ ಮತ್ತು ಎಂಬ್ರೇರ್ ಸಂಸ್ಥೆಗಳ ಮಹತ್ವದ ತೀರ್ಮಾನ
Published by Akshata Halli
03 ಅಕ್ಟೋಬರ್ 2026