- ಕಾಯ್ದೆಯ ಅನ್ವಯ ರಚನೆ: ವಕ್ಫ್ ಕಾಯ್ದೆ 1995ರ (2025ರ ತಿದ್ದುಪಡಿ ಕಾಯ್ದೆ) ಸೆಕ್ಷನ್ 13(1) ಮತ್ತು ಸೆಕ್ಷನ್ 14ರ ಅಡಿಯಲ್ಲಿ ಈ ನೂತನ ವಕ್ಫ್ ಮಂಡಳಿಯನ್ನು ಅಸ್ತಿತ್ವಕ್ಕೆ ತರಲಾಗಿದೆ.
- ಅಧ್ಯಕ್ಷರ ನೇಮಕ: ಬಿಜೆಪಿ ನಾಯಕ ಸನ್ವರ್ ಪಟೇಲ್ ಅವರನ್ನು ಈ ನೂತನ ವಕ್ಫ್ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
- ಒಟ್ಟು ಸದಸ್ಯರು: ನೂತನ ಮಂಡಳಿಯು ಒಟ್ಟು 10 ಸದಸ್ಯರನ್ನು ಒಳಗೊಂಡಿದೆ. ಇದರಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಮಿಷನರ್ ಪದನಿಮಿತ್ತ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.
- ಮನೋಜ್ ಮಾಲ್ಪಾನಿ (ಇಂದೋರ್)
- ಅನಿಮೇಶ್ ಭಾರ್ಗವ (ಗುಣ ಜಿಲ್ಲೆಯ ರಾಘೋಘರ್)
➤ ವಕ್ಫ್ ತಿದ್ದುಪಡಿ ಕಾಯ್ದೆ 2025: ಕೇಂದ್ರ ಸರ್ಕಾರವು ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ತರುವ ಉದ್ದೇಶದಿಂದ ಹಳೆಯ ಕಾಯ್ದೆಗೆ ವ್ಯಾಪಕ ತಿದ್ದುಪಡಿ ತಂದಿತ್ತು. ಸಂಸತ್ತಿನ ಉಭಯ ಸದನಗಳಲ್ಲಿ ಸುದೀರ್ಘ ಚರ್ಚೆಯ ನಂತರ ಅಂಗೀಕಾರವಾಗಿದ್ದ ಈ ಬಿಲ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಏಪ್ರಿಲ್ 5, 2025 ರಂದು ಅಂಕಿತ ಹಾಕಿದ್ದರು. ಈ ಕಾಯ್ದೆಯ ಪ್ರಮುಖ ಅಂಶವೆಂದರೆ ಪ್ರತಿ ರಾಜ್ಯದ ವಕ್ಸ್ ಮಂಡಳಿಯಲ್ಲಿ ಕನಿಷ್ಠ ಇಬ್ಬರು ಮುಸ್ಲಿಮೇತರ ತಜ್ಞರು ಮತ್ತು ಮಹಿಳೆಯರಿಗೆ ಕಡ್ಡಾಯ ಪ್ರಾತಿನಿಧ್ಯ ಇರಬೇಕು ಎನ್ನುವುದಾಗಿದೆ. ಇದೀಗ ಮಧ್ಯಪ್ರದೇಶ ಈ ನಿಯಮವನ್ನು ಜಾರಿಗೆ ತಂದ ಮೊದಲ ರಾಜ್ಯವಾಗಿದೆ.