* ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ. ಪ್ರಮುಖ ಪರಿಸರ ಸಮಸ್ಯೆಗಳಲ್ಲಿ ಒಂದಾದ ನೀರಿನ ಕೊರತೆಯತ್ತ ಗಮನ ಹರಿಸಲು ನಾವು ಈ ದಿನವನ್ನು ಆಚರಿಸುತ್ತೇವೆ.
* ಈ ವರ್ಷ 2025 ರ ವಿಶ್ವ ಜಲ ದಿನದ ಥೀಮ್ " ಹಿಮಪಾತ ಸಂರಕ್ಷಣೆ" ಎಂಬುದು ಥೀಮ್ ಆಗಿದೆ.
* 1992 ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ "ವಿಶ್ವಸಂಸ್ಥೆಯ (UN) ಪರಿಸರ ಮತ್ತು ಅಭಿವೃದ್ಧಿ ಸಮ್ಮೇಳನ"ದ ವೇಳಾಪಟ್ಟಿ 21 ರಲ್ಲಿ ವಿಶ್ವ ಜಲ ದಿನವನ್ನು ಸೇರಿಸಲಾಯಿತು. ಡಿಸೆಂಬರ್ 22, 1992 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು A/RES/47/193 ನಿರ್ಣಯವನ್ನು ಅಂಗೀಕರಿಸಿತು ಮತ್ತು ಮಾರ್ಚ್ 22 ಅನ್ನು ವಿಶ್ವ ಜಲ ದಿನವೆಂದು ಘೋಷಿಸಿತು.
* 1993 ರಿಂದ ನೀರಿನ ಪ್ರಾಮುಖ್ಯತೆ ಮತ್ತು ಅದನ್ನು ರಕ್ಷಿಸುವ ಅಗತ್ಯತೆಯ ಬಗ್ಗೆ ಸಾರ್ವಜನಿಕ ಪ್ರಜ್ಞೆಯನ್ನು ಮೂಡಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಿಂದ ಇದನ್ನು ವಾರ್ಷಿಕ ಕಾರ್ಯಕ್ರಮವಾಗಿ ಸ್ಥಾಪಿಸಲಾಯಿತು.
* ಜಲಸಂರಕ್ಷಣೆಗೆ ಕೇಂದ್ರ ಸರಕಾರದ ವಿವಿಧ ಯೋಜನೆಗಳು
- ಜಲಜೀವನ ಮಿಷನ್
- ಅಟಲ್ ಭುಜಲ್ ಯೋಜನೆ
- ಜಲಶಕ್ತಿ ಅಭಿಯಾನ
- ನ್ಯಾಷನಲ್ ವಾಟರ್ ಮಿಷನ್
- ನಮಾಮಿ ಗಂಗೆ
- ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ
- ಮಿಷನ್ ಅಮೃತ ಸರೋವರ
- ರಾಷ್ಟ್ರೀಯ ನದಿ ಸಂರಕ್ಷಣಾ ಕಾರ್ಯಕ್ರಮ
- ರಾಷ್ಟ್ರೀಯ ಸರೋವರ ಸಂರಕ್ಷಣಾ ಕಾರ್ಯಕ್ರಮ
- ಅಟಲ್ ಪುನರುಜ್ಜಿವನ ಮತ್ತು ನಗರ ಪರಿವರ್ತನೆ ಮಿಷನ್ 2.0
- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ
ಶನಿವಾರ, 22 ಮಾರ್ಚ್ 2025
10:52 ಪೂರ್ವಾಹ್ನ
Daily PDF
ಮಾರ್ಚ್ 22 :ವಿಶ್ವ ಜಲ ದಿನ
Authored by:
Bhagya R K