* ಮಾಲ್ಡೀವ್ಸ್ ದೇಶವು ತಂಬಾಕು ವ್ಯಸನವನ್ನು ತಡೆಯುವ ಗುರಿಯಿಂದ ಐತಿಹಾಸಿಕ ಧೂಮಪಾನ ನಿಷೇಧ ಕಾನೂನು ಜಾರಿಗೆ ತಂದಿದ್ದು, ರಾಷ್ಟ್ರಪತಿ ಮೊಹಮ್ಮದ್ ಮು’ಆಯೋಸು ಅವರ ನೇತೃತ್ವದಲ್ಲಿ ನವೆಂಬರ್ 1ರಿಂದ ಇದು ಪರಿಣಾಮಕಾರಿಯಾಗಿದೆ.
* ಹೊಸ ನಿಯಮಗಳ ಪ್ರಕಾರ, 2007ರ ಜನವರಿ 1ರಂದು ಅಥವಾ ನಂತರ ಜನಿಸಿದವರಿಗೆ ಯಾವುದೇ ತಂಬಾಕು ಉತ್ಪನ್ನಗಳನ್ನು ಖರೀದಿಸುವುದು, ಬಳಸುವುದು ಮತ್ತು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
* ಈ ನಿಷೇಧವು ಸಿಗರೇಟ್, ಚಿಲ್ಲು ತಂಬಾಕು, ಎಲೆಕ್ಟ್ರಾನಿಕ್ ಸಿಗರೇಟ್ ಹಾಗೂ ವೇಪಿಂಗ್ ಸಾಧನಗಳು ಸೇರಿದಂತೆ ಎಲ್ಲಾ ತಂಬಾಕು ಉತ್ಪನ್ನಗಳಿಗೆ ಅನ್ವಯಿಸುತ್ತದೆ. ಮಾರಾಟಗಾರರು ತಂಬಾಕು ಮಾರಾಟ ಮಾಡುವ ಮೊದಲು ಖರೀದಿದಾರರ ವಯಸ್ಸು ಪರಿಶೀಲಿಸುವುದು ಕಡ್ಡಾಯವಾಗಿದ್ದರೂ, ನಿಯಮ ಉಲ್ಲಂಘಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ.
* ಮಾಲ್ಡೀವ್ಸ್ ಅಂತರ-ಪೀಳಿಗೆಯ ತಂಬಾಕು ನಿಷೇಧವನ್ನು ಜಾರಿಗೆ ತಂದ ವಿಶ್ವದ ಮೊದಲ ದೇಶವೆಂಬ ಗೌರವವನ್ನು ಪಡೆದಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ ವರ್ಷ ಜಗತ್ತಿನಲ್ಲಿ 7 ಮಿಲಿಯನ್ ಜನರು ತಂಬಾಕು ಸಂಬಂಧಿತ ಕಾಯಿಲೆಗಳಿಂದ ಸಾವನ್ನಪ್ಪುತ್ತಾರೆ.
* 2024ರ ಸಮೀಕ್ಷೆಯ ಮಾಹಿತಿಯಂತೆ, ಮಾಲ್ಡೀವ್ಸ್‌ನಲ್ಲಿ 15 ರಿಂದ 69 ವರ್ಷದವರಲ್ಲಿ ತಂಬಾಕು ಬಳಕೆ ಗಮನಾರ್ಹವಾಗಿದೆ; ಇದರಲ್ಲಿ ಪುರುಷರಲ್ಲಿ 41.7% ಮತ್ತು ಮಹಿಳೆಯರಲ್ಲಿ 9.3%ರಷ್ಟು ವ್ಯಸನ ದಾಖಲಾಗಿದೆ. 13–15 ವರ್ಷದ ಹದಿಹರೆಯದವರಲ್ಲಿಯೂ ಬಳಕೆ ಹೆಚ್ಚುತ್ತಿರುವ ಹಿನ್ನೆಲೆ, ಯುವ ಪೀಳಿಗೆಯನ್ನು ತಂಬಾಕು ಹಾನಿಯಿಂದ ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಮಾಲ್ಡೀವ್ಸ್ ತೆಗೆದುಕೊಂಡಿರುವ ಈ ಹೆಜ್ಜೆಯನ್ನು ಆರೋಗ್ಯ ರಕ್ಷಣೆಯ ಮಾದರಿಯೆಂದು ಶ್ಲಾಘಿಸಿದೆ.
ಗುರುವಾರ, 06 ನವೆಂಬರ್ 2025
1:11 ಅಪರಾಹ್ನ
Daily PDF
ಮಾಲ್ಡೀವ್ಸ್‌ನಲ್ಲಿ ಧೂಮಪಾನ ನಿಷೇಧಕ್ಕೆ ಐತಿಹಾಸಿಕ ಕಾನೂನು
Authored by:
Akshata Halli