* ಮಾಲ್ಡಿವ್ಸ್‌ನಲ್ಲಿ ಜಲ ಸಾರಿಗೆಯನ್ನು ಉತ್ತೇಜಿಸಲು ಭಾರತವು ₹55 ಕೋಟಿ ಮೌಲ್ಯದ 10 ಕೋಟಿ ಎಂವಿಆರ್ ಅನುದಾನದ 13 ಒಪ್ಪಂದಗಳಿಗೆ ಸಹಿ ಹಾಕಿದೆ.
* ಈ ಯೋಜನೆಗಳು ಸಮುದ್ರ ಸಾರಿಗೆ ಜಾಲವಿಸ್ತರಣೆ ಹಾಗೂ ಸ್ಥಳೀಯ ಸಮುದಾಯಗಳ ಜೀವನಮಟ್ಟ ಉತ್ತಮಗೊಳಿಸಲು ಸಹಕಾರಿಯಾಗಲಿವೆ.
* ಮಾಲ್ಡೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಖಲೀಲ್ ಮತ್ತು ಭಾರತ ಹೈಕಮಿಷನರ್ ಜಿ. ಬಾಲಸುಬ್ರಮಣಿಯನ್ ಭಾನುವಾರ ಈ ಒಡಂಬಡಿಕೆಗಳಿಗೆ ಸಹಿ ಹಾಕಿದರು.
* ಈ ಒಪ್ಪಂದಗಳು ಇಬ್ಬರ ಸಂಬಂಧ ಬಲಪಡಿಸುವ ಹೆಜ್ಜೆಯಾಗಿದೆ ಎಂದು ಮಾಲ್ಡೀವ್ಸ್‌ ವಿದೇಶಾಂಗ ಇಲಾಖೆ ಹೇಳಿದೆ.
* “ಮಾಲ್ಡೀವ್ಸ್‌ ಜೊತೆ ಭಾಗಿಯಾಗಿ ಕಾರ್ಯನಿರ್ವಹಿಸಲು ಭಾರತಕ್ಕೆ ಸಂತೋಷವಾಗಿದೆ” ಎಂದು ಭಾರತೀಯ ಹೈಕಮಿಷನರ್ ಕಚೇರಿ ‘ಎಕ್ಸ್’ನಲ್ಲಿ ತಿಳಿಸಿದೆ.
* ದ್ವೀಪಗಳ ನಡುವಿನ ದೋಣಿ ಸಂಪರ್ಕವನ್ನು ಸುಧಾರಿಸಲು ಈ 13 ಯೋಜನೆಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ಮಾಲ್ಡೀವ್ಸ್‌ನ ಸಾರಿಗೆ ಸಚಿವರು ತಿಳಿಸಿದ್ದಾರೆ.