* ವಿಶ್ವದ ಮೊದಲ 'ವೇದ ಗಡಿಯಾರ' (Vikramaditya Vaidik Clock) ಈ ವರ್ಷ ಮಾರ್ಚ್ 01 ರಂದು ಮಧ್ಯಪ್ರದೇಶದ ಪವಿತ್ರ ನಗರ ಉಜ್ಜಯಿನಿಯಲ್ಲಿ ಅನಾವರಣಗೊಳ್ಳಲು ಸಿದ್ಧವಾಗಿದೆ.
* ಈ ವಿಶಿಷ್ಟ ಗಡಿಯಾರವು ವೈದಿಕ ಹಿಂದೂ ಪಂಚಾಂಗ, ಗ್ರಹಗಳ ಸ್ಥಾನಗಳು, ಮುಹೂರ್ತ, ಜ್ಯೋತಿಷ್ಯ ಲೆಕ್ಕಾಚಾರಗಳು, ಭವಿಷ್ಯವಾಣಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪ್ರದರ್ಶಿಸುತ್ತದೆ ಮತ್ತು ಭಾರತೀಯ ಪ್ರಮಾಣಿತ ಸಮಯ (IST) ಮತ್ತು ಗ್ರೀನ್‌ವಿಚ್ ಸರಾಸರಿ ಸಮಯ (GMT) ಅನ್ನು ಸಹ ಸೂಚಿಸುತ್ತದೆ.
* ಉಜ್ಜಯಿನಿಯ ಸರಕಾರಿ ಜಿವಾಜಿ ವೀಕ್ಷಣಾಲಯದಲ್ಲಿ 85 ಅಡಿ ಎತ್ತರದ ಟವರ್‌ನಲ್ಲಿ ವೈದಿಕ ಗಡಿಯಾರ ಅಳವಡಿಸಲಾಗಿದೆ.
* ಸಮಯದ ಲೆಕ್ಕಾಚಾರವು ಒಂದು ಸೂರ್ಯೋದಯದಿಂದ ಇನ್ನೊಂದು ಸೂರ್ಯೋದಯದವರೆಗಿನ ಅವಧಿಯನ್ನು ಆಧರಿಸಿದೆ.
* "ಎರಡು ಸೂರ್ಯೋದಯಗಳ ನಡುವಿನ ಸಮಯವನ್ನು 30 ಭಾಗಗಳಾಗಿ ವಿಭಾಗಿಸಲಾಗುತ್ತದೆ. ಐಎಸ್‌ಡಿ ಪ್ರಕಾರ ಈ 30 ಮಹೂರ್ತಗಳು ತಲಾ 48 ನಿಮಿಷಗಳದ್ದಾಗಿರುತ್ತದೆ. 300 ವರ್ಷಗಳ ಹಿಂದೆಯೇ ಉಜ್ಜಯಿನಿಯಿಂದಲೇ ಜಗತ್ತು ಕಾಲಮಾನವನ್ನು ನಿರ್ಧರಿಸುತ್ತಿತ್ತು.
* ಸಮಯ ತಿಳಿಯಲೆಂದೇ ಉಜ್ಜಯಿನಿಯಲ್ಲಿ ಒಂದು ಯಂತ್ರವೂ ಇತ್ತು ಎಂದು ತಜ್ಞರು ತಿಳಿಸುತ್ತಾರೆ. ಕರ್ಕಾಟಕ ಸಂಕ್ರಾಂತಿ ವೃತ್ತವು ಉಜ್ಜಯಿನಿಯ ಮೂಲಕ ಹಾದುಹೋಗುತ್ತದೆ' ಎಂದು ಮಹಾರಾಜ ವಿಕ್ರಮಾದಿತ್ಯ ಸಂಶೋಧನ ಕೇಂದ್ರದ ನಿರ್ದೇಶಕರಾದ ಶ್ರೀರಾಮ್ ತಿವಾರಿ ಅವರು ತಿಳಿಸಿದ್ದಾರೆ.
ಮಾ.1ರಂದು ಜಗತ್ತಿನ ಮೊದಲ ವೈದಿಕ ಗಡಿಯಾರ ಲೋಕಾರ್ಪಣೆ
Published by Bhagya R K
28 ಫೆಬ್ರವರಿ 2024