* ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭಾ ಚುನಾವಣೆಗಳ ಜೊತೆಗೆ 18ನೇ ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಜೂನ್ 04 ರಂದು (ಮಂಗಳವಾರ) ನಡೆಯಿತು. ಸಂಸತ್ತಿನ ಕೆಳಮನೆ ಎಂದೂ ಕರೆಯಲ್ಪಡುವ ಲೋಕಸಭೆಯು 543 ಸಂಸದೀಯ ಕ್ಷೇತ್ರಗಳನ್ನು ಒಳಗೊಂಡಿದೆ. 
* ಪ್ರಜಾಪ್ರಭುತ್ವದ ಅತಿದೊಡ್ಡ ವಿಶ್ವದಾಖಲೆಯ 64.2 ಕೋಟಿ ಮತದಾರರು ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಿದ್ದರು.
* ಬಿಜೆಪಿ 239 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ, 109 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಪ್ರತಿಪಕ್ಷ ಕಾಂಗ್ರೆಸ್ 99 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದು, 43 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ ನೇತೃತ್ವದ 'ಇಂಡಿಯಾ'ದ ಸಮಾಜವಾದಿ ಪಕ್ಷ 38, ತೃಣಮೂಲ ಕಾಂಗ್ರೆಸ್​ 29, ಡಿಎಂಕೆ 22 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.
* 80 ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶವು ಲೋಕಸಭೆಯಲ್ಲಿ ಭಾರತದ ಎಲ್ಲಾ ರಾಜ್ಯಗಳಿಗಿಂತ ಅತ್ಯಧಿಕ ಸದಸ್ಯರನ್ನು ಹೊಂದಿದೆ. ಮಹಾರಾಷ್ಟ್ರವು ಒಟ್ಟು 48 ಕ್ಷೇತ್ರಗಳೊಂದಿಗೆ ಅತಿ ಹೆಚ್ಚು ಕ್ಷೇತ್ರಗಳನ್ನು ಹೊಂದಿದೆ. 
* 2014ರ ಚುನಾವಣೆಯಲ್ಲಿ ನರೇಂದ್ರ ಮೋದಿ, ಬಿಜೆಪಿ ಪರ ದೊಡ್ಡ ಅಲೆಯನ್ನೇ ಸೃಷ್ಟಿಸಿದ್ದರು. ಇದರ ಪರಿಣಾಮ ಎನ್​ಡಿಎ ಮೈತ್ರಿಕೂಟ 'ಮ್ಯಾಜಿಕ್ ನಂಬರ್'​ 272ರ ಗಡಿಯನ್ನೂ ಮೀರಿ 354 ಸ್ಥಾನಗಳನ್ನು ಗೆದ್ದು ಭರ್ಜರಿ ಜಯಭೇರಿ ಬಾರಿಸಿತ್ತು. 
* 2019ರಲ್ಲೂ ನರೇಂದ್ರ ಮೋದಿ ಅವರು ಬಿಜೆಪಿ ಏಕಾಂಗಿಯಾಗಿಯೇ 303 ಕ್ಷೇತ್ರಗಳಲ್ಲಿ ಗೆದ್ದಿತ್ತು. ಈ ಬಾರಿ ಚುನಾವಣೆಯಲ್ಲೂ ಗೆಲುವಿನ ಅತ್ಯುತ್ಸಾಹದಲ್ಲೇ ಪ್ರಧಾನಿ ನರೇಂದ್ರ ಮೋದಿ 400ರ ಗಡಿದಾಟುವ ಮಹಾಘೋಷಣೆ ಮೊಳಗಿಸಿದ್ದರು. 
* ಬಿಜೆಪಿ ಹೆಚ್ಚು ಸ್ಥಾನ ಗಳಿಸಿದ ರಾಜ್ಯಗಳು ಮಧ್ಯಪ್ರದೇಶ, ದೆಹಲಿ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಯಾರುಮಾಚಲ ಪ್ರದೇಶ ಮತ್ತು ತ್ರಿಪುರಾ.

* ಲೋಕಸಭಾ ಚುನಾವಣೆಯಲ್ಲಿ ಗೆದ್ದವರು : 
- ಪ್ರಧಾನಿ ನರೇಂದ್ರ ಮೋದಿ (ವಾರಾಣಸಿ)
- ಅಮಿತ್ ಷಾ (ಗಾಂಧಿನಗರ)
- ರಾಹುಲ್ ಗಾಂಧಿ (ವಯನಾಡು, ರಾಯಬರೇಲಿ)
- ಶಶಿ ತರೂರ್ (ತಿರುವನಂತಪುರ)
- ನಿತಿನ್ ಗಡ್ಕರಿ (ನಾಗಪುರ)
- ರಾಜನಾಥ ಸಿಂಗ್ (ಲಖನೌ)
- ಅಖಿಲೇಶ್ ಯಾದವ್ (ಕನೌಜ್)
- ಕಂಗನಾ ರಣಾವತ್ (ಮಂಡಿ)

* ಲೋಕಸಭಾ ಚುನಾವಣೆಯಲ್ಲಿ ಸೋತವರು : 
- ಸ್ಮೃತಿ ಇರಾನಿ (ಅಮೇಠಿ)
- ಪ್ರಜ್ವಲ್ ರೇವಣ್ಣ (ಹಾಸನ)
- ರಾಜೀವ ಚಂದ್ರಶೇಖರ (ತಿರುವನಂತಪುರ)
- ಓಮರ್ ಅಬ್ದುಲ್ಲಾ (ಬಾರಾಮುಲ್ಲಾ)
- ಮಾಧವಿ ಲತಾ (ಹೈದರಾಬಾದ್)