* ಸುಪ್ರೀಂ ಕೋರ್ಟ್ ನ ನಿವೃತ ನ್ಯಾಯಾಧೀಶ ಅಜಯ.ಮಾಣಿಕ್ ರಾವ್. ಖಾನ್ವಿಲ್ಕರ್ ಅವರು ಲೋಕಪಾಲ ಮುಖ್ಯಸ್ಥರಾಗಿ ಮಾರ್ಚ್ 10 ರಂದು ಪ್ರಮಾಣ ವಚನ ಸ್ವೀಕರಿಸಿದರು.
* ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ಲೋಕಪಾಲ ಮುಖ್ಯಸ್ಥ ಖಾನ್ವಿಲ್ಕರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
* 66 ವರ್ಷದ ನಿವೃತ್ತ ನ್ಯಾಯಮೂರ್ತಿ ಖಾನ್ವಿಲ್ಕರ್ ಅವರು ಮೇ 13, 2016 ರಿಂದ ಜುಲೈ 29, 2022 ರವರೆಗೆ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ.
* ಮೇ 27, 2022 ರಂದು ಪಿನಾಕಿ ಚಂದ್ರ ಘೋಸ್ ಅವರ ನಿವೃತ್ತಿಯ ಎರಡು ವರ್ಷಗಳ ನಂತರ ನಿವೃತ್ತ ನ್ಯಾಯಮೂರ್ತಿ ಖಾನ್ವಿಲ್ಕರ್ ಅವರನ್ನು ಭ್ರಷ್ಟಾಚಾರ ವಿರೋಧಿ ಲೋಕಪಾಲ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.
ಲೋಕಪಾಲ ಮುಖ್ಯಸ್ಥರಾಗಿ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಖಾನ್ವಿಲ್ಕರ್ ಪ್ರಮಾಣ ವಚನ ಸ್ವೀಕಾರ
Published by Bhagya R K
11 ಮಾರ್ಚ್ 2024