* ಲಿಂಗ ಸಮಾನತೆಯಲ್ಲಿ ಭಾರತ 129ನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕಿಂತ ಎರಡು ಸ್ಥಾನ ಕೆಳಗೆ ಕುಸಿದಿದೆ. ವಿಶ್ವ ಆರ್ಥಿಕ ವೇದಿಕೆ ಈ ಸೂಚ್ಯಂಕವನ್ನು ಬಿಡುಗಡೆ ಮಾಡಿದೆ.
* ಶಿಕ್ಷಣ ಮತ್ತು ರಾಜಕೀಯ ಸಬಲೀಕರಣಗಳ ಮಾನದಂಡಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಕುಸಿತವಾಗಿರುವುದು ಈ ಬಾರಿ ಎರಡು ಅಂಕ ಕುಸಿತಕ್ಕೆ ಕಾರಣವಾಗಿದೆ. ಆರ್ಥಿಕ ಪಾಲ್ಗೊಳ್ಳುವಿಕೆ ಮತ್ತು ಅವಕಾಶಗಳು ಮಾನದಂಡದಲ್ಲಿ ಕೊಂಚ ಏರಿಕೆಯಾಗಿದೆ.
* ಒಟ್ಟು 146 ದೇಶಗಳಿಗೆ ಸೂಚ್ಯಂಕ ನೀಡಿದ್ದು, ಐಸ್‌ಲ್ಯಾಂಡ್ ಮೊದಲ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ದಕ್ಷಿಣ ಏಷ್ಯಾದಲ್ಲಿ ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ನಂತರದ ಸ್ಥಾನ ಭಾರತಕ್ಕೆ ಲಭ್ಯವಾಗಿದೆ. ಪಾಕಿಸ್ತಾನ 145ನೇ ಸ್ಥಾನದಲ್ಲಿದೆ.
* ಆರ್ಥಿಕ ಸಮಾನತೆಯಲ್ಲಿ ಶೇಕಡ 30ಕ್ಕಿಂತಲೂ ಕಡಿಮೆ ಇದ್ದು, ಸುಡಾನ್, ಪಾಕಿಸ್ತಾನ, ಇರಾನ್, ಬಾಂಗ್ಲಾದೇಶ, ಮೊರೊಕ್ಕೋ ಮುಂತಾದ ದೇಶಗಳ ಸಾಲಿನಲ್ಲಿದೆ.
* ವಿಶ್ವ ಆರ್ಥಿಕ ವೇದಿಕೆಯು (ಡಬ್ಲ್ಯುಇಎಫ್) ಜೂನ್ 12 ರಂದು (ಬುಧವಾರ) ಬಿಡುಗಡೆ ಮಾಡಿರುವ ಲಿಂಗತ್ವ ಅಂತರ ಸೂಚ್ಯಂಕ ವರದಿಯಲ್ಲಿ, ಫಿನ್‌ಲ್ಯಾಂಡ್ ಎರಡನೇ ಸ್ಥಾನದಲ್ಲಿದ್ದರೆ, ನಾರ್ವೆ, ನ್ಯೂಜಿಲೆಂಡ್ ಮತ್ತು ಸ್ವೀಡನ್ ಕ್ರಮವಾಗಿ ಮೂರರಿಂದ ಐದನೇ ಸ್ಥಾನದಲ್ಲಿವೆ. 
* ಶಿಕ್ಷಣ, ರಾಜಕೀಯ ಸಬಲೀಕರಣಕ್ಕೆ ಸಂಬಂಧಿಸಿದಂತೆ ಲಿಂಗತ್ವ ಸಮಾನತೆಯಲ್ಲಿ ಸಣ್ಣ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಭಾರತವು ಕಳೆದ ಸಾಲಿಗಿಂತ ಎರಡು ಸ್ಥಾನಗಳಷ್ಟು ಕುಸಿತ ಕಂಡಿದೆ. 
- ಲಿಂಗ ಸಮಾನತೆ
ಐಲ್ಯಾಂಡ್ - 1 ಸ್ಥಾನ
ಫಿನ್‌ಲ್ಯಾಂಡ್ - 2 ನೇ ಸ್ಥಾನ
ನಾರ್ವೆ - 3 ನೇ ಸ್ಥಾನ
ನ್ಯೂಜಿಲೆಂಡ್ - 4 ನೇ ಸ್ಥಾನ
ಸ್ಪೀಡನ್ - 5 ನೇ ಸ್ಥಾನ
ಬ್ರಿಟನ್ - 14 ನೇ ಸ್ಥಾನ
ಅಮೆರಿಕ - 43 ನೇ ಸ್ಥಾನ
ಭಾರತ - 129 ನೇ ಸ್ಥಾನ
ಪಾಕಿಸ್ತಾನ - 145 ನೇ ಸ್ಥಾನ
ಸೂಡಾನ್ - 146 ನೇ ಸ್ಥಾನ
- ರಾಜ್ಯ ಸರ್ಕಾರಗಳ ನಾಯಕರು: 10ನೇ ಸ್ಥಾನ
- ಪ್ರೌಢ ಶಿಕ್ಷಣಕ್ಕೆ ದಾಖಲು: ಭಾರತಕ್ಕೆ 65ನೇ ಸ್ಥಾನ
- ಜಾಗತಿಕ ಮಟ್ಟದಲ್ಲಿ ಲಿಂಗ ಸಮಾನತೆ ಅಂತರ ಶೇ.68.5
- ಲಿಂಗ ಸಮಾನತೆ ಸಾಧನೆಗೆ ಅಗತ್ಯ ಅವಧಿ 127 ವರ್ಷ
- ಪ್ರೌಢಶಿಕ್ಷಣ ದಾಖಲಾತಿಯಲ್ಲಿ ಶೇಕಡ 100ರ ಸಾಧನೆ