* ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಐದು ಹೊಸ ಜಿಲ್ಲೆಗಳನ್ನು ರಚಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ(ಆ.26) ಪ್ರಕಟಿಸಿದ್ದಾರೆ.
* ಅಭಿವೃದ್ಧಿ ಹೊಂದಿದ ಸಮೃದ್ಧ ಲಡಾಖ್ ಅನ್ನು ನಿರ್ಮಿಸುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಅನುಸರಿಸಿ ಕೇಂದ್ರ ಗೃಹ ಸಚಿವಾಲಯವು ಐದು ಹೊಸ ಜಿಲ್ಲೆಗಳನ್ನು ರಚಿಸಲು ನಿರ್ಧರಿಸಿದೆ ಎಂದು ಶಾ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
* ಜನ್ ಸ್ಕಾರ್, ದ್ರಾಸ್ , ಶಾಮ್, ನುಬ್ರಾ ಮತ್ತು ಜಾಂಗ್ ಥಾಂಗ್ ಇವು ಲಡಾಖ್‌ನಲ್ಲಿ ಅಸ್ತಿತ್ವಕ್ಕೆ ಬರಲಿರುವ ಹೊಸ ಜಿಲ್ಲೆಗಳಾಗಿವೆ. ಆಡಳಿತವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವ ಉದ್ದೇಶದಿಂದ ಹೊಸ ಜಿಲ್ಲೆಗಳನ್ನು ರಚಿಸಲಾಗಿದೆ.
* ಲಡಾಖ್‌ನ ಜನರಿಗೆ ಹೇರಳವಾದ ಅವಕಾಶಗಳನ್ನು ಸೃಷ್ಟಿಸಲು ಮೋದಿ ಸರ್ಕಾರ ಬದ್ಧವಾಗಿದೆ ಎಂದು ಶಾ ಹೇಳಿದರು.
* ಆಗಸ್ಟ್ 5, 2019 ರಂದು ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಭಾಗಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಲಾಗಿತ್ತು. ಐದು ವರ್ಷಗಳ ಹಿಂದೆ ಇದೇ ದಿನ, 370ನೇ ವಿಧಿಯಡಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಲಾಗಿತ್ತು. ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ಲಡಾಖ್ ಕೇಂದ್ರ ಗೃಹ ಸಚಿವಾಲಯದ ನೇರ ಆಡಳಿತಾತ್ಮಕ ನಿಯಂತ್ರಣದಲ್ಲಿದೆ.
* ಲಡಾಖ್ ನಲ್ಲಿ ಕೇವಲ 2 ಜಿಲ್ಲೆಗಳಾದ ಲೇಹ, ಕಾರ್ಗಿಲ್ ಜಿಲ್ಲೆಗಳಷ್ಟೇ ಇದ್ದವು ಹೊಸ 5 ಜಿಲ್ಲೆಗಳ ರಚನೆಯಿಂದ ಜಿಲ್ಲೆಗಳ ಸಂಖ್ಯೆಯು 7 ಕ್ಕೆ ಏರಿದಂತಾಗಿದೆ.
ಮಂಗಳವಾರ, 27 ಆಗಸ್ಟ್ 2024
10:53 ಪೂರ್ವಾಹ್ನ
Daily PDF
ಲಡಾಖ್‌ನಲ್ಲಿ 5 ಹೊಸ ಜಿಲ್ಲೆಗಳನ್ನು ರಚಿಸುವುದಾಗಿ ಗೃಹ ಸಚಿವ ಅಮಿತ್ ಶಾ ಘೋಷಣೆ
Authored by:
Jyoti Angadi