* ಜಗತ್ತನ್ನು ಕಾಡುತ್ತಿರುವ ಕ್ಯಾನ್ಸರ್ ರೋಗಕ್ಕೆ ಬ್ರಿಟನ್‌ನಲ್ಲಿ ಹೊಸ ಲಸಿಕೆ ಅಭಿವೃದ್ಧಿಪಡಿಸಲಾಗಿದ್ದು, ಪ್ರಾಯೋಗಿಕವಾಗಿ ಲಸೀಕಿಕರಣ ಆರಂಭಿಸಲಾಗಿದೆ.
* ಕ್ಯಾನ್ಸರ್ ಕಣಗಳನ್ನು ನಿಯಂತ್ರಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅಭಿವೃದ್ಧಿಪಡಿಸಿರುವ ಹೊಸ ಲಸಿಕೆಯ ಪ್ರಾಯೋಗಿಕ ಪರೀಕ್ಷೆಯನ್ನು ಬ್ರಿಟನ್‌ನ ಹಮ್ಮರ್‌ಸ್ಮಿತ್ ಆಸ್ಪತ್ರೆಯಲ್ಲಿ ಕೈಗೊಳ್ಳಲಾಗಿದೆ.
* ಎಂಆರ್ ಎನ್ ಎ-4359 ಹೆಸರಿನ ಕ್ಯಾನ್ಸರ್ ಚಿಕಿತ್ಸೆಗೆ ಲಸಿಕೆ ಅಭಿವೃದ್ಧಿಪಡಿಸಲಾಗಿದ್ದು, ಬ್ರಿಟನ್‌ನಲ್ಲಿ ಕೆಲವು ಕ್ಯಾನ್ಸರ್ ರೋಗಿಗಳಿಗೆ ನೀಡಲಾಗಿದೆ. ಕೋವಿಡ್ ಸೋಂಕಿಗೆ ಲಸಿಕೆ ಅಭಿವೃದ್ಧಿಪಡಿಸಿದ ಮಾದರಿಯಲ್ಲೇ ಕ್ಯಾನ್ಸರ್ ನಿವಾರಣೆಗೆ ಎಂಆರ್‌ಎನ್‌ಎ ಲಸಿಕೆ ಅಭಿವೃದ್ಧಿಗೊಳಿಸಲಾಗಿದೆ.
* ಈ ಲಸಿಕೆಯನ್ನು ಇಂಪೀರಿಯಲ್ ಕಾಲೇಜ್ ಎನ್‌ಎಚ್ಎಸ್ ಹೆಲ್ತ್ ಕೇರ್ ಟ್ರಸ್ಟ್ ನಲ್ಲಿ ಹಾಗೂ ಬ್ರಿಟನ್ ಸರಕಾರದ ಸಹಯೋಗದಲ್ಲಿ ಮಾಡೆರ್ನಾ ಫಾರ್ಮಾಸ್ಯುಟಿಕಲ್ ಕಂಪನಿ ಲಸಿಕೆ ರೂಪಿಸಿದೆ.
* ಮೊಬಿಲೈಜ್ ಪ್ರಯೋಗವು ಲಂಡನ್‌ನ ಇಂಪೀರಿಯಲ್ ಕಾಲೇಜ್ ಮತ್ತು ಇಂಪೀರಿಯಲ್ ಕಾಲೇಜ್ ಹೆಲ್ತ್‌ಕೇರ್ NHS ಟ್ರಸ್ಟ್‌ನ ಪಾಲುದಾರಿಕೆಯಲ್ಲಿ ನಡೆಸಲ್ಪಡುತ್ತದೆ, ಹ್ಯಾಮರ್ಸ್ಮಿತ್ ಆಸ್ಪತ್ರೆಯಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಅಂಡ್ ಕೇರ್ ರಿಸರ್ಚ್ (NIHR) ಇಂಪೀರಿಯಲ್ ಕ್ಲಿನಿಕಲ್ ರಿಸರ್ಚ್ ಫೆಸಿಲಿಟಿಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಮಂಗಳವಾರ, 06 ಫೆಬ್ರುವರಿ 2024
5:00 ಅಪರಾಹ್ನ
Daily PDF
ಕ್ಯಾನ್ಸರ್ ರೋಗಕ್ಕೆ ಬ್ರಿಟನ್ ನಲ್ಲಿ ಹೊಸ ಲಸಿಕೆ ಅಭಿವೃದ್ಧಿ
Authored by:
Akshata Halli