* ದೇಶದಲ್ಲಿ 2023 ರಲ್ಲಿ 25.55 ಲಕ್ಷ ಟಿಬಿ ಪ್ರಕರಣಗಳು ದಾಖಲಾಗಿದ್ದು, ಇದು 1960ರ ದಶಕದಲ್ಲಿ 'ರಾಷ್ಟ್ರೀಯ ಕ್ಷಯರೋಗ ಕಾರ್ಯಕ್ರಮ' ನಿರ್ಮೂಲನೆ (ಎನ್‌ಟಿಇಪಿ) ಆರಂಭಿಸಿದ ನಂತರ ಪತ್ತೆಯಾಗಿರುವ ಅಧಿಕ ಪ್ರಕರಣಗಳಾಗಿವೆ ಎಂದು ರಾಷ್ಟ್ರೀಯ ಟಿಬಿ ಎಲಿಮಿನೇಷನ್ ಪ್ರೋಗ್ರಾಂನ ಇಂಡಿಯಾ ಟಿಬಿ ವರದಿ-2024 ತಿಳಿಸಿದೆ.
* ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರದ ವತಿಯಿಂದ ನಗರದಲ್ಲಿ ಮಾರ್ಚ್ 27 ರಂದು (ಬುಧವಾರ) ನಡೆದ ವಿಶ್ವ ಕ್ಷಯರೋಗ ದಿನದ ಕಾರ್ಯಕ್ರಮದಲ್ಲಿ 'ಕ್ಷಯರೋಗದ ನಿರ್ಮೂಲನೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ರೋಗದ ಪತ್ತೆ ಹಾಗೂ ಚಿಕಿತ್ಸೆ ಬಗ್ಗೆ ಸಾರ್ವಜನಿಕರಿಗೆ ಸೂಕ್ತ ಅರಿವು ಮತ್ತು ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ.
* ಭಾರತ ದೇಶದಲ್ಲಿ 2015ರಿಂದ 2022ರ ಅವಧಿಯಲ್ಲಿ ಕ್ಷಯರೋಗ ಪ್ರಕರಣಗಳ ಪ್ರಮಾಣ ಶೇ.16ರಷ್ಟು ಕಡಿಮೆಯಾಗಿದ್ದವು. ಹಾಗೂ 2023ರಲ್ಲಿ ಈ ಪ್ರಮಾಣ ಹೆಚ್ಚಾಗಿದೆ ಎಂದು ವರದಿಯಾಗಿದೆ.
* ಪತ್ತೆಯಾಗಿರುವ ಪ್ರಕರಣಗಳ ಪೈಕಿ ಉತ್ತರ ಪ್ರದೇಶದಲ್ಲಿ 8.4 ಲಕ್ಷ ಪ್ರಕರಣಗಳು ಪತ್ತೆಯಾಗಿದ್ದು, 2017 ಕ್ಕೆ ಹೋಲಿಸಿದರೆ 2018 ರಲ್ಲಿ ಶೇ.1.7 ರಷ್ಟು ಏರಿಕೆಯಲಿದೆ. ಹಾಗೂ ನಂತರದ ಸ್ಟ್ಯಾಂಡಲ್ಲಿ ಬಿಹಾರವಿದೆ.
* 2023ರಲ್ಲಿ ಪ್ರತಿ ಲಕ್ಷ ಜನಸಂಖ್ಯೆಯಲ್ಲಿ ಸರಿಸುಮಾರು 179 ಮಂದಿಗೆ ಟಿ.ಬಿ ಕಾಯಿಲೆ ಇರುವುದನ್ನು ಪತ್ತೆ ಹಚ್ಚಲಾಗಿದೆ. ಇದರಿಂದ 2 ಚಿಕಿತ್ಸೆಗೆ ಅನುಕೂಲವಾಗುವುದು - ಮಾತ್ರವಲ್ಲ, ಮರಣ ಪ್ರಮಾಣವನ್ನೂ ತಗ್ಗಿಸಬಹುದು.
* ಮಲ್ಟಿ ಡ್ರಗ್ ರೆಸಿಸ್ಟೆಂಟ್ ಟಿಬಿ ಮೂಲಕ 63,939 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 2023ರಲ್ಲಿ ರೋಗ ಲಕ್ಷಣಗಳಿಂದಾಗಿ ಸುಮಾರು 20.5ಕೋಟಿಗೂ ಅಧಿಕ ಮಂದಿಯನ್ನು ತಪಾಸಣೆ ಮಾಡಲಾಗಿದೆ. 2023ರಲ್ಲಿ ಪತ್ತೆಯಾಗಿರುವ ಒಟ್ಟು ಟಿ.ಬಿ ಪ್ರಕರಣಗಳ ಪೈಕಿ ಶೇ.60.7ರಷ್ಟು ಪುರುಷರು, ಶೇ.39.2ರಷ್ಟು ಮಹಿಳೆಯರು, ಶೇ.0.04ರಷ್ಟು ತೃತೀಯ ಲಿಂಗಿಗಳಿದ್ದಾರೆ.
* ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಶಶಿಧರ ಅವರು ಕ್ಷಯರೋಗವು ಮೈಕ್ರೋ ಬ್ಯಾಕ್ಟಿರಿಯಂ ಟ್ಯೂಬರ್‌ಕ್ಯೂಲೋಸಿಸ್ ಎಂಬ ಸೂಕ್ಷ್ಮಾಣುವಿನಿಂದ ರೋಗಿಯು ಕೆಮ್ಮುವುದರಿಂದ ಮತ್ತು ಸೀನುವುದರಿಂದ ಹೊರಬರುವ ಉಗುಳಿನಿಂದ ಹರಡುತ್ತದೆ' ಎಂದು ಹೇಳಿದರು.
ಶನಿವಾರ, 30 ಮಾರ್ಚ್ 2024
11:45 ಪೂರ್ವಾಹ್ನ
Daily PDF
ಕ್ಷಯರೋಗ ವರದಿ ಪ್ರಕಟ : ದೇಶದಲ್ಲಿ 2023 ರಲ್ಲಿ 25.55 ಲಕ್ಷ ಟಿಬಿ ಪ್ರಕರಣ ಪತ್ತೆ
Authored by:
Bhagya R K