* ವ್ಯವಸಾಯ ಮತ್ತು ರೈತ ಕಲ್ಯಾಣ ಸಚಿವಾಲಯವು "ಕ್ರಾಪಿಕ್" (CROPIC) ಎಂಬ ಅಧ್ಯಯನವನ್ನು ಪ್ರಾರಂಭಿಸಲು ಯೋಜಿಸಿದೆ.
* CROPIC ಎಂಬುದು ಬೆಳೆಗಳ ತಕ್ಷಣದ ನಿರೀಕ್ಷಣೆ ಮತ್ತು ಚಿತ್ರಗಳ ಸಂಗ್ರಹ (Collection of Real Time Observations & Photo of Crops) ಇದು ಬೆಳೆಗಳ ನಿಜ ಸಮಯದ ಚಿತ್ರಗಳನ್ನು ಸಂಗ್ರಹಿಸಿ, ಅವುಗಳ ಆರೋಗ್ಯ ಹಾಗೂ ನಷ್ಟವನ್ನು ವಿಶ್ಲೇಷಿಸಲು ಉಪಯೋಗಿಸುವ ಡಿಜಿಟಲ್ ಉಪಕ್ರಮ
* ಈ ಅಧ್ಯಯನವು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ(PMFBY)ಯಡಿ ಜಾರಿಗೆ ಬರಲಿದೆ. ಇದರ ಮೂಲಕ ಬೆಳೆ ಗುರುತು ಡೈರೆಕ್ಟರಿ ರಚನೆ, ನಷ್ಟದ ನಿಖರ ಮೌಲ್ಯಮಾಪನ ಮತ್ತು ರೈತರಿಗೆ ಸ್ವಯಂಚಾಲಿತ ಪರಿಹಾರ ಪಾವತಿಗೆ ಸಹಾಯ ಮಾಡುವುದು ಮುಖ್ಯ ಉದ್ದೇಶವಾಗಿದೆ.
* ಕೃಷಿ ಹಂಗಾಮಿನಲ್ಲಿ ರೈತರು ತಮ್ಮ ಬೆಳೆಗಳ ಫೋಟೋಗಳನ್ನು CROPIC ಮೊಬೈಲ್ ಆ್ಯಪ್ ಮೂಲಕ ಅಪ್‌ಲೋಡ್ ಮಾಡುತ್ತಾರೆ. ಈ ಫೋಟೋಗಳು ಕ್ಲೌಡ್ ಆಧಾರಿತ ಎಐ ತಂತ್ರಜ್ಞಾನದಿಂದ ವಿಶ್ಲೇಷಿಸಲಾಗುತ್ತದೆ. ವೆಬ್ ಡ್ಯಾಶ್‌ಬೋರ್ಡ್ ಮೂಲಕ ವೀಕ್ಷಣೆಯ ಅವಕಾಶವೂ ಇದೆ.
* ಈ ಪೈಲಟ್ ಯೋಜನೆ 2025ರ ಖರೀಫ್ ಮತ್ತು 2025-26ರ ರಬಿ ಹಂಗಾಮುಗಳಲ್ಲಿ 50 ಜಿಲ್ಲೆಗಳ ಮಟ್ಟದಲ್ಲಿ ಆರಂಭವಾಗಲಿದೆ. 2026ರಿಂದ ದೇಶವ್ಯಾಪಿ ಜಾರಿಗೆ ನಿರೀಕ್ಷಿಸಲಾಗಿದೆ.
* CROPIC ಯೋಜನೆಗೆ PMFBY ಅಡಿಯಲ್ಲಿ ಇರುವ ಫಂಡ್ ಫಾರ್ ಇನೊವೆಷನ್ ಅಂಡ್ ಟೆಕ್ನಾಲಜಿ (FIAT) ನಿಂದ ಹಣ ನೀಡಲಾಗುತ್ತದೆ. FIAT ಅಡಿಯಲ್ಲಿ ₹825 ಕೋಟಿ ರೂಪಾಯಿಯ ಮೊತ್ತವನ್ನು ಮೀಸಲಾಗಿಸಲಾಗಿದೆ.
* CROPIC ಎನ್ನುವುದು ರೈತರ ನಷ್ಟ ಮೌಲ್ಯಮಾಪನವನ್ನು ನಿಖರಗೊಳಿಸಲು, ಪರಿಹಾರ ವೇಗವಿಲ್ಲದಿದ್ದ ಸಮಸ್ಯೆಯನ್ನು ದೂರ ಮಾಡಿಸಲು ಮತ್ತು ಡಿಜಿಟಲ್ ಕೃಷಿ ವಿಮಾ ವ್ಯವಸ್ಥೆಯನ್ನು ಬಲಪಡಿಸಲು ರೂಪಿಸಲಾಗಿರುವ ಮಹತ್ವದ ತಂತ್ರಜ್ಞಾನ ಆಧಾರಿತ ಯೋಜನೆಯಾಗಿದೆ.
ಕೃತಕ ಬುದ್ಧಿಮತ್ತೆ (AI) ಬಳಸಿ ಬೆಳೆಗಳನ್ನು ಅಧ್ಯಯನ ಮಾಡಲು ಹೊಸ ಯೋಜನೆ: CROPIC
Published by Jyoti Angadi
12 ಜೂನ್ 2025