* ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯದ ಕೆಲವು ಕಡೆಗಳಲ್ಲಿ 'ಹಸಿರು ಬರ' ಪರಿಸ್ಥಿತಿ ಇರುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದ್ದಾರೆ.
* 'ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ, ಯಾವ್ಯಾವ ತಾಲ್ಲೂಕುಗಳು ಬರ ಘೋಷಣೆಗೆ ಅರ್ಹವಾಗುತ್ತವೆ ಎನ್ನುವುದನ್ನು ಗುರುತಿಸಲು ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಗುರುವಾರದ (ಆಗಸ್ಟ್ 31) ಒಳಗೆ ಬೆಳೆ ನಷ್ಟದ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
* ಕಡಿಮೆ ಪ್ರಮಾಣದ ಮಳೆಯಾಗಿ ಮೊಳಕೆಯೊಡೆದ ಬೆಳೆ ಒಣಗಿದೆ. ಸುತ್ತಲಿನ ಪ್ರದೇಶದಲ್ಲಿ ಹಸಿರಿದ್ದರೂ ಬೆಳೆಗಳಿಗೆ ಹಾನಿಯಾಗಿದೆ. ಇದನ್ನು “ಹಸಿರು ಬರ' ಎಂದು ಕರೆಯುತ್ತಾರೆ.
* ರಾಜ್ಯದಲ್ಲಿ ಬರದಿಂದ ಅಂದಾಜು 40 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಮತ್ತು ಎರಡು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಗೊಳಗಾಗಿದ್ದು, 195 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೆಪ್ಟೆಂಬರ್ 19 ರಂದು ತಿಳಿಸಿದ್ದಾರೆ.
* ಈ ಕುರಿತು ರಾಜ್ಯದ ನಾಲ್ಕು ಕೃಷಿ ವಿಜ್ಞಾನ ವಿಶ್ವ ವಿದ್ಯಾಲಯಗಳು ಮತ್ತು ಒಂದು ತೋಟಗಾರಿಕಾ ವಿಶ್ವ ವಿದ್ಯಾಲಯದ ತಜ್ಞರಿಂದ ವರದಿ ಪಡೆಯಲಾಗಿದೆ' ಎಂದು ತಿಳಿಸಿದ್ದಾರೆ .
ಗುರುವಾರ, 21 ಸೆಪ್ಟೆಂಬರ್ 2023
3:08 ಅಪರಾಹ್ನ
Daily PDF
ಕೃಷ್ಣ ಬೈರೇಗೌಡ ಅವರಿಂದ ಹಸಿರು ಬರ' ಪ್ರಸ್ತಾಪ
Authored by:
Bhagya R K