* ಹಣ್ಣುಗಳ ರಾಜ ಮಾವು, ಆದರೆ ಮಾವಿನಲ್ಲಿ ಅತ್ಯಂತ ದುಬಾರಿ ಹಣ್ಣು ಮಿಯಾಝಕಿ. ತನ್ನ ಆಕರ್ಷಕ ಬಣ್ಣದಿಂದಲೇ ಈ ಮಾವು ಗ್ರಾಹಕರನ್ನು ಸೆಳೆಯುತ್ತಿದೆ. ಅದೇ ರೀತಿ ಮಿಯಾಝಕಿ ಮಾವಿಗಿರುವ ಅತ್ಯಧಿಕ ದರ ಕೃಷಿಕರನ್ನೂ ಸೆಳೆಯುತ್ತಿದ್ದು, ಗುಜರಾತ್, ಮಧ್ಯಪ್ರದೇಶ, ಕೋಳ್ಕೊತ್ತಾ ಹಾಗೂ ಕೇರಳದಿಂದ ಗಿಡಗಳನ್ನು ತರಿಸಿ ನೆಡುತ್ತಿದ್ದಾರೆ.
* ವಿಶ್ವದ ಅತ್ಯಂತ ದುಬಾರಿ ಮಾವು ಎಂದೇ ಪ್ರಸಿದ್ಧಿ ಪಡೆದಿರುವ ಮಿಯಾಝಕಿ ಮಾವು ಈಗ ಕರುನಾಡಿನ ರೈತರ ಅಂಗಳದಲ್ಲೂ ಬೆಳೆಯುತ್ತಿದೆ. ಶಿವಮೊಗ್ಗ ಸಾಗರದ ರಾಜೇಂದ್ರ ಹಿಂಡೂಮನೆ, ದಕ್ಷಿಣ ಕನ್ನಡದ ಅನಿಲ್ ಬಳಂಜ ಹಾಗೂ ಸುಳ್ಯದ ತಿರುಮಲೇಶ್ವರ ಭಟ್ ಅವರೂ ಈ ಮಾವು ಬೆಳೆದಿದ್ದು, ಫಸಲಿನ ನಿರೀಕ್ಷೆಯಲ್ಲಿದ್ದಾರೆ.
ಸೋಮವಾರ, 13 ಮೇ 2024
4:50 ಅಪರಾಹ್ನ
Daily PDF
ಕರ್ನಾಟಕದಲ್ಲೂ ಫಲ ಕೊಟ್ಟ ವಿಶ್ವದ ದುಬಾರಿ ಮಾವು
Authored by:
Bhagya R K