* 2024–25ನೇ ಆರ್ಥಿಕ ವರ್ಷದಲ್ಲಿ ದೇಶಕ್ಕೆ ₹4.26 ಲಕ್ಷ ಕೋಟಿ ವಿದೇಶಿ ನೇರ ಬಂಡವಾಳ (FDI) ಹರಿದುಬಂದಿದ್ದು, ಇದು 2023–24ರೊಂದಿಗೆ ಹೋಲಿಸಿದರೆ ಶೇ 13ರಷ್ಟು ಹೆಚ್ಚಾಗಿದೆ.
* ಕರ್ನಾಟಕಕ್ಕೆ ₹56,415 ಕೋಟಿ ಎಫ್‌ಡಿಐ ಹರಿದುಬಂದು, ಮಹಾರಾಷ್ಟ್ರದ ನಂತರ ದೇಶದಲ್ಲೇ ಎರಡನೇ ಅತಿಹೆಚ್ಚು ಹೂಡಿಕೆ ಪಡೆದ ರಾಜ್ಯವಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ(ಮೇ 27) ಮಾಹಿತಿ ನೀಡಿದೆ.
* ಮಹಾರಾಷ್ಟ್ರ ₹1.67 ಲಕ್ಷ ಕೋಟಿ, ದೆಹಲಿ ₹51,209 ಕೋಟಿ, ಗುಜರಾತ್ ₹48,648 ಕೋಟಿ, ತಮಿಳುನಾಡು ₹31,407 ಕೋಟಿ, ಹರಿಯಾಣ ₹26,799 ಕೋಟಿ ಹಾಗೂ ತೆಲಂಗಾಣ ₹25,519 ಕೋಟಿ ಎಫ್‌ಡಿಐ ಆಕರ್ಷಿಸಿದ್ದವು.
* ಸೇವೆ, ವ್ಯಾಪಾರ, ದೂರಸಂಪರ್ಕ, ಆಟೊಮೊಬೈಲ್, ರಾಸಾಯನಿಕ ಮತ್ತು ನಿರ್ಮಾಣ ವಲಯಗಳಲ್ಲಿ ಬಂಡವಾಳ ಹರಿವಿನ ಪ್ರಮಾಣ ಹೆಚ್ಚಿದೆಯೆಂದು ಕೇಂದ್ರ ತಿಳಿಸಿದೆ.
* 2024–25ರ ಮಾರ್ಚ್ ತ್ರೈಮಾಸಿಕದಲ್ಲಿ ಹೂಡಿಕೆ ಪ್ರಮಾಣದಲ್ಲಿ ಶೇ 24.5ರಷ್ಟು ಕುಸಿತವಿದೆ ಎಂದು ಸರ್ಕಾರ ಹೇಳಿದೆ.
* ಇದರಲ್ಲಿಯೂ ₹56,000 ಕೋಟಿ ಮೌಲ್ಯದ 13ನೇ ಅಧೀನದ ಹೊಸ ಯೋಜನೆಗಳಿಗೆ ಬಂಡವಾಳ ಹೂಡಿಕೆಯಾಗಿದ್ದು,ಇನ್ನು 2024-25ರಲ್ಲಿ ಸುಮಾರು 1.2 ಲಕ್ಷ ಉದ್ಯೋಗಾವಕಾಶಗಳು ನಿರ್ಮಾಣವಾಗುವ ನಿರೀಕ್ಷೆ ಇದೆ.
ಇದು ಕರ್ನಾಟಕದ ಆರ್ಥಿಕ ಬೆಳವಣಿಗೆಗೆ ದಿಕ್ಕು ನೀಡುವ ಮಹತ್ವದ ಬೆಳವಣಿಗೆ.
ಬುಧವಾರ, 28 ಮೇ 2025
1:18 ಅಪರಾಹ್ನ
Daily PDF
ಕರ್ನಾಟಕದಲ್ಲಿ ₹56,415 ಕೋಟಿ ಎಫ್‌ಡಿಐ ಹೂಡಿಕೆ - ದೇಶದಲ್ಲಿ ಎರಡನೇ ಸ್ಥಾನ
Authored by:
Akshata Halli