* ಕರ್ನಾಟಕ ರಾಜ್ಯದ ತಲಾ ಆದಾಯ ಕಳೆದ ಒಂದು ವರ್ಷದಲ್ಲಿ 36 ಸಾವಿರ ರೂ. ಹೆಚ್ಚಳವಾಗಿದೆ ಎಂದು 2022- 23ನೇ ಸಾಲಿನ ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ರಾಜ್ಯ ನಿವ್ವಳ ಆಂತರಿಕ ಉತ್ಪನ್ನ ಹಾಗೂ ತಲಾ ಆದಾಯ ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತಿದೆ.
* ರಾಜ್ಯದ ವಾರ್ಷಿಕ ತಲಾ ಆದಾಯದಂತೆ ಜಿಲ್ಲಾವಾರು ತಲಾ ಆದಾಯವೂ ಹೆಚ್ಚಳವಾಗಿದ್ದು, ಬೆಂಗಳೂರು ನಗರ 6,21,131 ರೂ. ತಲಾ ಆದಾಯದೊಂದಿಗೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದರೆ, ಕಲಬುರಗಿ ಜಿಲ್ಲೆ 1,24,998 ರೂ. ತಲಾ ಆದಾಯದೊಂದಿಗೆ ಜಿಲ್ಲೆಗಳಲ್ಲೇ ಕೊನೆಯ ಸ್ಥಾನದಲ್ಲಿದೆ.
* 3,70,834 ರೂ.ಗಳೊಂದಿಗೆ ದಕ್ಷಿಣ ಕನ್ನಡ ಎರಡನೇ ಸ್ಥಾನದಲ್ಲಿದ್ದರೆ, 3,38,978 ರೂ. ತಲಾ ಆದಾಯದೊಂದಿಗೆ ಕರಾವಳಿ ಜಿಲ್ಲೆ ಉಡುಪಿ ಮೂರನೇ ಸ್ಥಾನದಲ್ಲಿದೆ.
* ಚಿಕ್ಕಮಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿವೆ. ಕೊನೆಯ ಐದನೇ ಸ್ಥಾನದಲ್ಲಿ ಕ್ರಮವಾಗಿ ಯಾದಗಿರಿ, ಕೊಪ್ಪಳ, ಬೆಳಗಾವಿ, ಬೀದರ್, ಕಲಬುರಗಿ ಜಿಲ್ಲೆಗಳಿವೆ.
* ದೇಶದ ಪಶ್ಚಿಮ ಹಾಗೂ ದಕ್ಷಿಣ ಭಾಗದಲ್ಲಿರುವ ರಾಜ್ಯಗಳಿಗೆ ಹೋಲಿಸಿದರೆ ಪೂರ್ವ ಹಾಗೂ ಉತ್ತರ ಭಾಗದಲ್ಲಿರುವ ರಾಜ್ಯಗಳ ತಲಾ ಆದಾಯದಲ್ಲಿ ಏರಿಕೆಯಾಗಿಲ್ಲ. ಇದರಿಂದ ರಾಜ್ಯಗಳ ನಡುವೆ ಅಸಮಾನತೆಯ ಬಿರುಕು ದೊಡ್ಡದಾಗುತ್ತಿದೆ ಎಂದು ಹೇಳಿದೆ.
* 2011-12ರಲ್ಲಿ ಗುಜರಾತ್‌ನ ತಲಾ ಆದಾಯವು ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ 1.4 ಪಟ್ಟು ಹೆಚ್ಚು ಇತ್ತು. 2022-23ರಲ್ಲಿ 1.8 ಪಟ್ಟಿನಷ್ಟಿದ್ದು, ಕರ್ನಾಟಕದ ತಲಾ ಆದಾಯವು 1.7 ಪಟ್ಟು ಹಾಗೂ ತೆಲಂಗಾಣದ ತಲಾ ಆದಾಯವು 1.6 ಪಟ್ಟಿನಷ್ಟು ಇದೆ. ಆದರೆ ಪಶ್ಚಿಮ ಬಂಗಾಳ, ರಾಜಸ್ಥಾನ, ಬಿಹಾರದ ತಲಾ ಆದಾಯವು ಇಳಿಕೆಯಾಗಿದ್ದು, ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆ ಇದೆ ಎಂದು ತಿಳಿಸಿದೆ.
ಶುಕ್ರವಾರ, 29 ಮಾರ್ಚ್ 2024
4:15 ಅಪರಾಹ್ನ
Daily PDF
ಕರ್ನಾಟಕ ರಾಜ್ಯದ ತಲಾದಾಯ ಹೆಚ್ಚಳ
Authored by:
Bhagya R K