* ಅ.1ರಿಂದ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ಚಿಕಿತ್ಸೆ ಒದಗಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಅಧಿಕೃತವಾಗಿ ಜಾರಿಯಾಗಲಿದೆ.
* ಈ ಯೋಜನೆ ಹಲವು ವರ್ಷಗಳಿಂದ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದರೂ ಈಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ದಿನಾಂಕ ನಿಗದಿಗೊಳಿಸಿ ಆದೇಶ ಹೊರಡಿಸಿದೆ.
* ಸುಮಾರು 5.20 ಲಕ್ಷ ಸರ್ಕಾರಿ ನೌಕರರು, ನಿಗಮ–ಮಂಡಳಿ–ಅನುದಾನಿತ ಸಂಸ್ಥೆಗಳ 3 ಲಕ್ಷ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರಿಗೆ ಇದರ ಲಾಭ ಸಿಗಲಿದೆ. ಈ ಬಾರಿ ಮಹಿಳಾ ನೌಕರರ ತಂದೆ–ತಾಯಿಗೂ ಆರೋಗ್ಯ ಸೌಲಭ್ಯ ವಿಸ್ತರಿಸಲಾಗಿದೆ.
* ಯೋಜನೆಯ ಅನುಷ್ಠಾನ ಹೊಣೆ ಸುವರ್ಣ ಕರ್ನಾಟಕ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ವಹಿಸಿಕೊಂಡಿದ್ದು, ನೌಕರರು ಪ್ರತಿ ತಿಂಗಳು ಕಂತು ಪಾವತಿಸಬೇಕು. ಇಚ್ಛಿಸದವರು ಅ.18ರೊಳಗೆ ಲಿಖಿತ ಆಕ್ಷೇಪ ಸಲ್ಲಿಸಬಹುದು.
* ಪತಿ–ಪತ್ನಿ ಇಬ್ಬರೂ ನೌಕರರಾಗಿದ್ದರೆ ಕಂತು ಒಬ್ಬರ ವೇತನದಿಂದ ಮಾತ್ರ ಕಡಿತವಾಗುತ್ತದೆ. ಇತರೆ ಸರ್ಕಾರಿ ಸಂಸ್ಥೆಗಳ ನೌಕರರ ಕಂತುಗಳನ್ನು ಸಂಸ್ಥೆಗಳೇ ಕಡಿತ ಮಾಡಿ ನೇರವಾಗಿ ಟ್ರಸ್ಟ್‌ಗೆ ಜಮೆ ಮಾಡಬೇಕು. ಎಲ್ಲರ ಕಂತುಗಳನ್ನು ಅಕ್ಟೋಬರ್ ತಿಂಗಳ ವೇತನದಿಂದಲೇ ಕಡಿತಗೊಳಿಸಲು ಸೂಚಿಸಲಾಗಿದೆ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ : ಅ.1ರಿಂದ ಜಾರಿ
Published by Jyoti Angadi
24 ಸೆಪ್ಟೆಂಬರ್ 2025