* ಅಂತರರಾಷ್ಟ್ರೀಯ ಮಟ್ಟದ ಕಲಾಸಾಧಕರಿಗೆ ಕೊಡಮಾಡುವ ಪ್ರತಿಷ್ಠಿತ 'ಸ್ಯಾಮ್ ಗಿಲಿಯಮ್ ಪ್ರಶಸ್ತಿ'ಗೆ 2025ನೇ ಸಾಲಿನಲ್ಲಿ ಕನ್ನಡತಿ ಕಲಾವಿದೆ ಶೀಲಾ ಗೌಡ ಅವರು ಭಾಜನರಾಗಿದ್ದಾರೆ.
* ಇವರು ಈ ಪ್ರಶಸ್ತಿ ಪಡೆದ ಎರಡನೇ ಸಾಧಕಿಯಾಗಿದ್ದಾರೆ. ಶೀಲಾ ಗೌಡ ಅವರ ಕಲಾಕೃತಿಗಳು ದೇಶ-ವಿದೇಶಗಳ ಅನೇಕ ಗ್ಯಾಲರಿಗಳಲ್ಲಿ, ಮ್ಯೂಸಿಯಂಗಳಲ್ಲಿ ಪ್ರದರ್ಶನಗೊಂಡಿವೆ. ಅವರ ಸಾಧನೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
* ದಿಯಾ ಆರ್ಟ್ ಪೌಂಡೇಷನ್ ಮತ್ತು ಸ್ಯಾಮ್ ಗಿಲಿಯಮ್ ಫೌಂಡೇಷನ್ ಜಂಟಿಯಾಗಿ ಈ ಪ್ರಶಸ್ತಿಯನ್ನು ನೀಡುತ್ತವೆ.
* ಈ ಪ್ರಶಸ್ತಿ 53.49 ಲಕ್ಷ (75000 ಡಾಲರ್) ಮೊತ್ತದಾಗಿದೆ. ಜೊತೆಗೆ, ದಿಯಾ ಆರ್ಟ್ ಫೌಂಡೇಷನ್‌ನ ವೇದಿಕೆಯಲ್ಲೂ ಅವಕಾಶ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
* ಈ ವರ್ಷ 2023ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಮೊದಲ ವರ್ಷದ ಪ್ರಶಸ್ತಿಯನ್ನು 2024ರಲ್ಲಿ ಘಾನಾ ದೇಶದ ಇಬ್ರಾಹಿಂ ಮಹಿಮಾ ಅವರಿಗೆ ನೀಡಿ ಗೌರವಿಸಲಾಯಿತು.
ಮಂಗಳವಾರ, 08 ಎಪ್ರಿಲ್ 2025
4:53 ಅಪರಾಹ್ನ
Daily PDF
ಕನ್ನಡತಿ ಶೀಲಾ ಗೌಡ ಅವರಿಗೆ 2025ರ ಸ್ಯಾಮ್ ಗಿಲಿಯಮ್ ಪ್ರಶಸ್ತಿ
Authored by:
Jyoti Angadi