* ಖ್ಯಾತ ಹಿರಿಯ ನಟ ನಿರ್ಮಾಪಕ 81 ವರ್ಷ ವಯಸ್ಸಿನ ದ್ವಾರಕೀಶ್ ಅವರು ಏಪ್ರಿಲ್ 16 (ಮಂಗಳವಾರ) ರಂದು ಎಲೆಕ್ಟ್ರಾನಿಕ್ ಸಿಟಿಯ ಸ್ವಗೃಹದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
* ಚಿತ್ರ ನಿರ್ಮಾಣ, ನಿರ್ದೇಶನ, ನಟನೆ ಮೂಲಕ ಜನಪ್ರಿಯರಾಗಿದ್ದ ದ್ವಾರಕೀಶ್ ಅವರು ಹಲವು ಚಿತ್ರಗಳ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.
* 1964ರಲ್ಲಿ 'ವೀರ ಸಂಕಲ್ಪ' ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ದ್ವಾರಕೀಶ್ ಅವರು ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡರು.
* ಡಾ.ರಾಜಕುಮಾರ್ ಅವರು ಅಭಿನಯಸಿದ 'ಮೇಯರ್ ಮುತ್ತಣ' ಎಂಬ ಸಿನಿಮಾ ನಿರ್ಮಿಸಿಸುವ ಮೂಲಕ ಸ್ವತಂತ್ರ ನಿರ್ಮಾಪಕರಾದರು. ದ್ವಾರಕೀಶ್ ಅವರು ಸುಮಾರು 40 ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ್ದಾರೆ.
* 1985ರಲ್ಲಿ 'ನೀ ಬರೆದ ಕಾದಂಬರಿ' ಸಿನಿಮಾ ನಿರ್ದೇಶಿಸುವ ಮೂಲಕ ಚಿತ್ರ ನಿರ್ದೇಶನಕ್ಕೂ ಕಾಲಿಟ್ಟರು. 'ಜನ್ಮರಹಸ್ಯ', 'ಮಂಕುತಿಮ್ಮ', 'ಪೆದ್ದ ಗೆದ್ದ', 'ಕಿಟ್ಟು ಪುಟ್ಟು', 'ಸಿಂಗಾಪುರದಲ್ಲಿ ರಾಜಾಕುಳ್ಳ', 'ಆಪ್ತಮಿತ್ರ', 'ಪ್ರಚಂಡ ಕುಳ್ಳ', 'ಗುರುಶಿಷ್ಯರು', 'ಆಟಗಾರ', 'ವಿಷ್ಣುವರ್ಧನ್' ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡದ ಖ್ಯಾತ ಹಿರಿಯ ನಟ ದ್ವಾರಕೀಶ್ ನಿಧನ
Published by Bhagya R K
17 ಏಪ್ರಿಲ್ 2024