* ಖನಿಜ ಭದ್ರತಾ ಹಣಕಾಸು ಜಾಲ (ಎಂಎಸ್ ಎಫ್‌ಎನ್) ಇದರ ಸದಸ್ಯ ದೇಶವಾಗಿ ಭಾರತ ಅಧಿಕೃತವಾಗಿ ಸೇರ್ಪಡೆಗೊಂಡಿದೆ.
* ಎಂಎಸ್‌ಎಫ್ ಎನ್-ಇದು ಅಮೆರಿಕ ನೇತೃತ್ವದ ಒಂದು ಗುಂಪಾಗಿದೆ. ತಂತ್ರಜ್ಞಾನ ಮತ್ತು ಶುದ್ಧ ಇಂಧನಕ್ಕೆ ಅಗತ್ಯವಾದ ಪ್ರಮುಖ ಖನಿಜಗಳನ್ನು ಪಡೆಯಲು ವಿವಿಧ ದೇಶಗಳು ಒಟ್ಟಾಗಿ ಕೆಲಸ ಮಾಡುವಂತೆ ನೆರವಾಗಲು ಈ ಮಹತ್ವದ ಜಾಲವನ್ನು ಸೃಷ್ಟಿಸಲಾಗಿದೆ.
* ವಿಶ್ವ ಸಂಸ್ಥೆ ಮಹಾಧಿವೇಶನದ (ಯುಎನ್ ಜಿ) ವಿದೇಶಾಂಗ ಇಲಾಖೆಯು ಭಾರತದ ಸೇರ್ಪಡೆ ಕುರಿತು ಘೋಷಣೆ ಮಾಡಿತ್ತು. ಜಾಲದಲ್ಲಿ ಇದೀಗ 14 ದೇಶಗಳು ಮತ್ತು ಐರೋಪ್ಯ ಒಕ್ಕೂಟ ಒಳಗೊಂಡಿವೆ.
* ಎಂಎಸ್‌ಎಫ್ ಎನ್ ಇದು ಖನಿಜ ಭದ್ರತೆ ಪಾಲುದಾರಿಕೆಗೆ (ಎಂಎಸ್‌ಪಿ) ಸಂಬಂಧಿಸಿದ್ದಾಗಿದೆ. 2022ರಲ್ಲಿ ಅಮೆರಿಕ ಎಂಎಸ್‌ಪಿಯನ್ನು ಆರಂಭಿಸಿತ್ತು. ಭಾರತ 2023ರಲ್ಲಿ ಎಂಎಸ್‌ಪಿಯನ್ನು ಸೇರಿತ್ತು. ಪ್ರಮುಖವಾದ ಖನಿಜಗಳು ಜಾಗತಿಕವಾಗಿ ಲಭ್ಯಗೊಳಿಸುವಲ್ಲಿ ಭಾರತದ ಬೆಳೆಯುತ್ತಿರುವ ಪಾತ್ರವನ್ನು ಅದು ತೋರಿಸುತ್ತದೆ.
* ಅಪರೂಪದ ಭೂ ಖನಿಜಗಳು (ರೇರ್ ಅರ್ಥ್ ಎಲಿಮೆಂಟ್ಸ್) ಮುಂತಾದ ಪ್ರಮುಖ ಖನಿಜಗಳಿಗಾಗಿ ಕೆಲವು ನಿರ್ದಿಷ್ಟ ದೇಶಗಳು, ವಿಶೇಷವಾಗಿ ಚೀನಾದ ಮೇಲೆ ಅವಂಬಿಸುವುದನ್ನು ತಗ್ಗಿಸುವುದರ ಮೇಲೆ ಎಂಎಸ್ ಎಫ್‌ಎನ್ ಗಮನವನ್ನು ಕೇಂದ್ರೀಕರಿಸುತ್ತದೆ.
* ಇಲೆಕ್ಟಿಕ್ ವಾಹನಗಳು ಮತ್ತು ಸೌರ ಫಲಕಗಳಂಥ ಶುದ್ಧ ಇಂಧನ ತಂತ್ರಜ್ಞಾನಗಳಲ್ಲಿ ರೇರ್ ಅರ್ಥ್ ಎಲಿಮೆಂಟ್ಸ್ ಮಹತ್ವದ ಪಾತ್ರ ವಹಿಸುತ್ತದೆ.
* ಸದಸ್ಯ ದೇಶಗಳಲ್ಲಿ ಸಹಯೋಗಕ್ಕಾಗಿ ಅಭಿವೃದ್ಧಿ ಹಣಕಾಸು ಸಂಸ್ಥೆಗಳು (ಡಿಎಫ್‌ಐ) ಮತ್ತು ರಫ್ತು ಕ್ರೆಡಿಟ್ ಸಂಸ್ಥೆಗಳಿಗೆ (ಇಸಿಎ) ಎಂಎಸ್‌ಎಫ್‌ಎನ್ ಪ್ರೋತ್ಸಾಹ ನೀಡುತ್ತದೆ.
ಖನಿಜ ಭದ್ರತಾ ಹಣಕಾಸು ಜಾಲದ (ಎಂಎಸ್ ಎಫ್‌ಎನ್) ಸದಸ್ಯ ರಾಷ್ಟ್ರವಾಗಿ ಭಾರತ
Published by Jyoti Angadi
16 ಅಕ್ಟೋಬರ್ 2024