* ದೇಶದ ಸರಕಾರಿ ಸ್ವಾಮ್ಯದ 'ಕೆನರಾ ಬ್ಯಾಂಕ್ ಸಲ್ಲಿಸಿರುವ ಅತ್ಯುತ್ತಮ ಸೇವೆಗೆ “ಭಾರತೀಯ ಚೇಂಬರ್ ಆಫ್ ಕಾಮರ್ಸ್'ನ ಐದು ಪ್ರಶಸ್ತಿಗಳು ದೊರಕಿವೆ.
* ಲಂಡನ್‌ನಲ್ಲಿ ನಡೆದ ಜಾಗತಿಕ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಕೆನರಾ ಬ್ಯಾಂಕ್‌ಗೆ ಭಾರತ ವಿಭಾಗದಲ್ಲಿ 2022ನೇ ಸಾಲಿನ ಪ್ರತಿಷ್ಠಿತ 'ಬ್ಯಾಂಕರ್ಸ್ ಬ್ಯಾಂಕ್ ಆಫ್ ದಿ ಇಯರ್' ಪ್ರಶಸ್ತಿ ಪ್ರದಾನ ಮಾಡಲಾಗಿದೆ.
* ಬ್ಯಾಂಕ್‌ನ ವ್ಯವಸ್ಥಾಪಕ ಹಾಗೂ ಸಿಇಒ ಎಲ್.ವಿ. ಪ್ರಭಾಕರ್ ಅವರು ಲಂಡನ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು ಎಂದು ತಿಳಿಸಲಾಗಿದೆ.
* ಭಾರತೀಯ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ “ಎಮರ್ಜಿಂಗ್ ಏಷ್ಯನ್ ಬ್ಯಾಂಕಿಂಗ್ ಕಾಂಕ್ಷೇವ್ ಮತ್ತು ಪ್ರಶಸ್ತಿ' ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೆನರಾ ಬ್ಯಾಂಕ್ ನೀಡಿದ ಗಣನೀಯ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.
* ಉತ್ತಮ ಬೆಳವಣಿಗೆ ದಾಖಲಿಸಿದ್ದಾಕ್ಕಾಗಿ 'ಅತ್ಯುತ್ತಮ ಕಾರ್ಯಕ್ಷಮತೆ', ಉತ್ತಮ ಸೇವೆಗಾಗಿ “ಭಾರತದ ಅತ್ಯುತ್ತಮ ಬ್ಯಾಂಕ್", ಉತ್ತಮ ಆಸ್ತಿ ಸಂರಕ್ಷಣೆಗಾಗಿ 'ಅತ್ಯುತ್ತಮ ಗುಣಮಟ್ಟದ ಆಸ್ತಿ', ಉತ್ತಮ ಲಾಭಗಳಿಸಿದ ಕಾರ್ಯಕ್ಕಾಗಿ 'ಅತ್ಯುತ್ತಮ ಲಾಭದಾಯಕ ಪ್ರಶಸ್ತಿ ಮತ್ತು ಸೂಕ್ಷ್ಮ ಸಂದರ್ಭ ಪರಿಸ್ಥಿತಿ ನಿಭಾಯಿಸಿದ್ದರೆ 'ಅತ್ಯುತ್ತಮ ನಿರ್ವಹಣೆ' ಪ್ರಶಸ್ತಿಯನ್ನು ನೀಡಲಾಗಿದೆ.
ಗುರುವಾರ, 13 ಜುಲೈ 2023
10:47 ಪೂರ್ವಾಹ್ನ
Daily PDF
ಕೆನರಾ ಬ್ಯಾಂಕ್‌ಗೆ 'ಬ್ಯಾಂಕರ್ಸ್ ಬ್ಯಾಂಕ್ ಆಫ್ ದಿ ಇಯರ್' ಪ್ರಶಸ್ತಿ
Authored by:
Bhagya R K