* ಪ್ರಯಾಣಿಕರಿಗೆ ಸುಲಭವಾಗ್ಲಿ ಅಂತ ಸೆಕ್ಯುರಿಟಿ ಚೆಕ್‌ನಲ್ಲಿ ಹೊಸ ತಂತ್ರಜ್ಞಾನ ಬಳಸೋದಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮುಂದಾಗಿದೆ. ಸೆಕ್ಯುರಿಟಿ ಚೆಕಿಂಗ್‌ಗಾಗಿ ʻಕಂಪ್ಯೂಟೆಡ್ ಟೊಮೊಗ್ರಫಿ ಎಕ್ಸ್-ರೇʼ (CTX) ಅನ್ನೋ ಸ್ಕ್ಯಾನಿಂಗ್ ಯಂತ್ರ ಬಳಸೋಕೆ ತಯಾರಿ ನಡೆಸಲಾಗ್ತಿದೆ.
* ಈ ಮೂಲಕ ʻಕಂಪ್ಯೂಟೆಡ್ ಟೊಮೊಗ್ರಫಿ ಎಕ್ಸ್-ರೇʼ (CTX) ತಂತ್ರಜ್ಞಾನ ಅಳವಡಿಸಿಕೊಳ್ತಿರೋ ದೇಶದ ಮೊದಲ ವಿಮಾನ ನಿಲ್ದಾಣ ಆಗಲಿದೆ.
* ಸಿಟಿಎಕ್ಸ್ ಯಂತ್ರದ ಅಳವಡಿಕೆಯಿಂದ ಭದ್ರತಾ ತಪಾಸಣೆಯ ಸಮಯದಲ್ಲಿ ಪ್ರಯಾಣಿಕರು ತಮ್ಮ ಹ್ಯಾಂಡ್‌ಬ್ಯಾಗ್‌ಗಳಿಂದ ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ವೈಯಕ್ತಿಕ ಎಲೆಕ್ಟ್ರಾನಿಕ್ ಸಾಧನಗಳನ್ನು ತೆಗೆದು ಟ್ರೇಗೆ ಇಡಬೇಕಂತಿಲ್ಲ.
* ಈ ತಂತ್ರಜ್ಞಾನವನ್ನು ಬಳಸುವ ಮೂಲಕ, ನಿರ್ವಾಹಕರು ವಿವಿಧ ಆಯಾಮಗಳಿಂದ ಬ್ಯಾಗ್‌ಗಳನ್ನು ನೋಡುವುದಕ್ಕೆ ಸಾಧ್ಯವಾಗುತ್ತದೆ, ಮರು-ಪರಿಶೀಲನೆಗಳು ಮತ್ತು ಭೌತಿಕ ತಪಾಸಣೆಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಸಮಯದ ಉಳಿತಾಯ ಕೂಡ ಆಗಲಿದೆ.
* ಪ್ರಯಾಣಿಕರು ತಮ್ಮ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಹೇರ್‌ಜೆಲ್‌ಗಳು, ಏರೋಸಾಲ್‌ಗಳನ್ನು ತಮ್ಮ ಹ್ಯಾಂಡ್‌ಬ್ಯಾಗ್‌ನಲ್ಲಿಯೇ ಇಟ್ಟುಕೊಂಡು ಸ್ಕ್ರೀನಿಂಗ್‌ಗೆ ಹೋಗಬಹುದು.
* ಸಿಟಿಎಕ್ಸ್ ಯಂತ್ರದ ಪರಿಚಯವು ವಾಕ್-ಥ್ರೂ ಮೆಟಲ್ ಡಿಟೆಕ್ಟರ್ ಮೂಲಕ ಹಾದುಹೋಗುವ ನಂತರ ಪ್ರಯಾಣಿಕರನ್ನು ಚೆಕ್ ಮಾಡುವ ಅಭ್ಯಾಸವನ್ನು ತೆಗೆದುಹಾಕುತ್ತದೆ. ಸಿಟಿಎಕ್ಸ್ ಪ್ರೂಫ್ ಆಫ್ ಕಾನ್ಸೆಪ್ಟ್ (POC) ಪ್ರಸ್ತುತ T2 ನಲ್ಲಿ ಪ್ರಯೋಗಗಳನ್ನು ನಡೆಸುತ್ತಿದೆ.
ಮಂಗಳವಾರ, 28 ನವೆಂಬರ್ 2023
10:36 ಪೂರ್ವಾಹ್ನ
Daily PDF
ಕೆಂಪೇಗೌಡ ವಿಮಾನ ನಿಲ್ದಾಣ: ಬರಲಿದೆ ಹೈಟೆಕ್ ಸೆಕ್ಯುರಿಟಿ ಟೆಕ್ನಾಲಜಿ
Authored by:
Bhagya R K