* ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ 10 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಈ ಪ್ರಶಸ್ತಿಗಳು ಆಹಾರ, ಪಾನೀಯ ಹಾಗೂ ಆತಿಥ್ಯ ಕ್ಷೇತ್ರದಲ್ಲಿ ವಿಮಾನ ನಿಲ್ದಾಣದ ಉನ್ನತ ಸೇವೆಗೆ ನೀಡಿ ಗೌರವಿಸಲಾಗಿದೆ.
* ಸ್ಪೇನ್‌ನ ಬಾರ್ಸಿಲೋನಾದಲ್ಲಿ ನಡೆದ ‘ವಿಮಾನ ನಿಲ್ದಾಣ ಎಫ್‌ಎಂಡ್‌ಬಿ ಮತ್ತು ಆತಿಥ್ಯ ಪ್ರಶಸ್ತಿ ಸಮಾರಂಭ-2025’ನಲ್ಲಿ ಈ ಪ್ರಶಸ್ತಿಗಳನ್ನು ಸ್ವೀಕರಿಸಲಾಯಿತು ಎಂದು ಕೆಐಎಎಲ್ ಮುಖ್ಯ ವಾಣಿಜ್ಯ ಅಧಿಕಾರಿ ಕೆನ್ನೆತ್ ಗುಲ್ಡ್‌ಬ್ಜೆರ್ಗ್ ತಿಳಿಸಿದ್ದಾರೆ.
* ಟರ್ಮಿನಲ್ 2 ರಲ್ಲಿರುವ 080 ಲೌಂಜ್ ಒಟ್ಟು ಏಳು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಇದರಲ್ಲಿ ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ‘ಅತ್ಯುತ್ತಮ ಲೌಂಜ್’, ‘ಏರ್‌ಪೋರ್ಟ್ ಎಫ್‌ಎಂಡ್‌ಬಿ ಆಫರ್ ಆಫ್ ದಿ ಇಯರ್ - ಸೆನ್ಸ್ ಆಫ್ ಪ್ಲೇಸ್’, ಮತ್ತು ಕಿಲಾ ರೆಸ್ಟೋರೆಂಟ್‌ಗೆ ‘ಅತ್ಯುತ್ತಮ ರೆಸ್ಟೋರೆಂಟ್ ವಿನ್ಯಾಸ’ ಪ್ರಶಸ್ತಿಗಳು ಸೇರಿವೆ.
* ಇದರಿಂದ ಬೆಂಗಳೂರು ವಿಮಾನ ನಿಲ್ದಾಣದ ಲೌಂಜ್‌ಗಳು ಮತ್ತು ರೆಸ್ಟೋರೆಂಟ್‌ಗಳು ಭಾರತೀಯ ಹಾಗೂ ಜಾಗತಿಕ ಮಟ್ಟದಲ್ಲಿ ತಮ್ಮ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿವೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಾಗತಿಕ ಮಟ್ಟದಲ್ಲಿ 10 ಪ್ರಶಸ್ತಿಗಳ ಗೌರವ
Published by Jyoti Angadi
03 ಜುಲೈ 2025