* ಪ್ರಧಾನಿ ಮಾರ್ಕ್ ಕಾರ್ನಿ ಅವರು ಮೇ 13 ರಂದು (ಮಂಗಳವಾರ) ಘೋಷಿಸಿದ ಪ್ರಮುಖ ಸಚಿವ ಸಂಪುಟ ಪುನರ್ರಚನೆಯಲ್ಲಿ ಅನಿತಾ ಆನಂದ್ ಅವರನ್ನು ಕೆನಡಾದ ಹೊಸ ವಿದೇಶಾಂಗ ಸಚಿವೆಯಾಗಿ ನೇಮಿಸಲಾಗಿದೆ.
* ಇತ್ತೀಚೆಗೆ ನಡೆದ ಸಂಸತ್ತಿನ ಚುನಾವಣೆಯಲ್ಲಿ ಅವರ ಲಿಬರಲ್ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಂತರ ಪ್ರಧಾನಿ ಮಾರ್ಕ್ ಕಾರ್ನಿ ಮತ್ತು ಅವರ 28 ಸದಸ್ಯರ ಮಂತ್ರಿ ಮಂಡಳಿಯು ಮೇ 13, 2025 ರಂದು ಪ್ರಮಾಣವಚನ ಸ್ವೀಕರಿಸಿದರು.
* ಅನಿತಾ ಆನಂದ್ ಸೇರಿದಂತೆ ಭಾರತೀಯ ಮೂಲದ ನಾಲ್ವರು ಜನರನ್ನು ಮಾರ್ಕ್ ಕಾರ್ನಿ ಅವರ ಸರ್ಕಾರದಲ್ಲಿ ಸೇರಿಸಲಾಗಿದೆ.
* ಕೆನಡಾದ ವಿದೇಶಾಂಗ ಸಚಿವೆಯಾಗಿ ನೇಮಕಗೊಂಡ ಮೊದಲ ಹಿಂದೂ ಮಹಿಳೆ ಅನಿತಾ ಆನಂದ್, ಪವಿತ್ರ ಹಿಂದೂ ಧರ್ಮಗ್ರಂಥವಾದ ಭಗವದ್ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕರಿಸಿದರು.
* 2019ರಲ್ಲಿರಾಜಕೀಯ ಪ್ರವೇಶಿಸಿದ ಅನಿತಾ ಅವರು, ರಾಷ್ಟ್ರೀಯ ರಕ್ಷಣ ಸಚಿವೆ ಹಾಗೂ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಅನಿತಾ ಅವರು ವಿದೇಶಾಂಗ ಸಚಿವರಾಗಿರುವ ಹಿನ್ನೆಲೆಯಲ್ಲಿ ಖಲಿಸ್ತಾನಿಗಳ ಕುತಂತ್ರದಿಂದಾಗಿ ಹದಗೆಟ್ಟಿರುವ ಭಾರತ ಮತ್ತು ಕೆನಡಾ ನಡುವಿನ ಬಾಂಧ್ಯವ ಸರಿದಾರಿಗೆ ಬರುವ ನಿರೀಕ್ಷೆಯಿದೆ.
ಕೆನಡಾದ ನೂತನ ವಿದೇಶಾಂಗ ಸಚಿವೆಯಾಗಿ ಅನಿತಾ ಆನಂದ್ ನೇಮಕ
Published by Jyoti Angadi
15 ಮೇ 2025