* ಭಾರತೀಯ ಸಂವಿಧಾನದ ಮೂಲ ರಚನೆಯ ಸಿದ್ದಾಂತವನ್ನು ರೂಪಿಸಿದ ಐತಿಹಾಸಿಕ ಕೇಶವಾನಂದ ಭಾರತಿ ಪ್ರಕರಣದ ತೀರ್ಪು ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ 10 ಭಾಷೆಗಳಲ್ಲಿ ಲಭ್ಯವಿದೆ ಎಂದು ಮುಖ್ಯ ನ್ಯಾಯಮೂರ್ತಿ(ಸಿಜೆಐ) ಡಿವೈ ಚಂದ್ರಚೂಡ್ ಅವರು ತಿಳಿಸಿದ್ದಾರೆ.
* ಈ ಪ್ರಕರಣದ ತೀರ್ಪಿಗೆ 50 ವರ್ಷ ತುಂಬಿರುವ ಹಿನ್ನೆಲೆ ವಿವಿಧ ಭಾಷೆಗಳಲ್ಲಿ ಪ್ರಕಟಿಸಲಾಗಿದೆ ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.
* ಕೇಶವಾನಂದ ಭಾರತಿ ಪ್ರಕರಣದ ಪ್ರಕರಣದ ಹಿನ್ನೆಲೆ, ಒಳಗೊಂಡಿರುವ ಪ್ರಮುಖ ಕಾನೂನು ಸಮಸ್ಯೆಗಳು, ಪೀಠದ ಅಧ್ಯಕ್ಷತೆ ವಹಿಸಿದ್ದ ನ್ಯಾಯಾಧೀಶರು, ಪ್ರಕರಣದಲ್ಲಿ ಹಾಜರಾದ ವಕೀಲರು, ಮಾಡಿದ ವಾದಗಳು ಮತ್ತು ತೀರ್ಮಾನಗಳ ವಿವರಗಳನ್ನು ಹತ್ತು ಭಾಷೆಗಳಲ್ಲಿ ನೀಡಲಾಗಿದೆ.
* ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಒಡಿಯಾ, ಮಲಯಾಳಂ, ಗುಜರಾತಿ, ಕನ್ನಡ, ಬೆಂಗಾಲಿ, ಅಸ್ಸಾಮಿ ಮತ್ತು ಮರಾಠಿಯಲ್ಲಿ ತೀರ್ಪನ್ನು ಅನುವಾದಿಸಲಾಗಿದೆ.
* ಈ ಉಪಕ್ರಮವು ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ವಿವಿಧ ಭಾರತೀಯ ಭಾಷೆಗಳಿಗೆ ಭಾಷಾಂತರಿಸಲು ನಡೆಯುತ್ತಿರುವ ಪ್ರಯತ್ನದ ಭಾಗ ಎಂದು ಸಿಜೆಐ ಹೇಳಿದ್ದಾರೆ. 20,000 ತೀರ್ಪುಗಳನ್ನು ಈಗಾಗಲೇ ಸುಪ್ರೀಂ ಕೋರ್ಟ್ ವರದಿಗಳ ಎಲೆಕ್ಟ್ರಾನಿಕ್ ಆವೃತ್ತಿಯಲ್ಲಿ ತಿಳಿಸಲಾಗಿದೆ.
'ಕೇಶವಾನಂದ ಭಾರತಿ' ಐತಿಹಾಸಿಕ ತೀರ್ಪು ಕನ್ನಡದಲ್ಲೂ ಲಭ್ಯ
Published by Bhagya R K
08 ಡಿಸೆಂಬರ್ 2023