* ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ನಗದುರಹಿತ ಚಿಕಿತ್ಸೆ ನೀಡಲು ಕೇಂದ್ರ ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀಶ್ ಗಡ್ಕರಿ ಅವರು ತಿಳಿಸಿದ್ದಾರೆ.
* ಅಪಘಾತ ನಡೆದ 24 ಗಂಟೆಯೊಳಗೆ ಪೊಲೀಸರಿಗೆ ಮಾಹಿತಿ ಒದಗಿಸಿದರೆ ತಕ್ಷಣವೇ ಗಾಯಾಳುಗಳಿಗೆ ನಗದು ರಹಿತ ಚಿಕಿತ್ಸೆ ನೀಡಲಾಗುವುದು. ಈ ಯೋಜನೆಯಡಿ ಗಾಯಾಳುಗಳು ಗರಿಷ್ಠ 7 ದಿನದವರೆಗೆ ಆಸ್ಪತ್ರೆಯಲ್ಲಿ ಅಥವಾ ಗರಿಷ್ಠ 1.5 ಲಕ್ಷ ರೂ. ಚಿಕಿತ್ಸೆ ಪಡೆಯಲು ಅರ್ಹರಾಗಿದ್ದಾರೆ.
* ಹಿಟ್ ಆ್ಯಂಡ್ ರನ್ ಕೇಸ್‌ನಲ್ಲಿ ಮೃತರ ಕುಟುಂಬಸ್ಥರಿಗೆ ತಕ್ಷಣವೇ 2 ಲಕ್ಷ ರೂ. ಪರಿಹಾರ ದೊರೆಯಲಿದೆ. ಕೆಲ ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ರಾಜ್ಯಗಳಿಗೂ ಯೋಜನೆ ವಿಸ್ತರಣೆಯಾಗಲಿದೆ ಎಂದು ನಿತೀಶ್ ಗಡ್ಕರಿ ಅವರು ತಿಳಿಸಿದ್ದಾರೆ.
* 2024 ರಲ್ಲಿ ರಸ್ತೆ ಅಪಘಾತಗಳಲ್ಲಿ 1.8 ಲಕ್ಷ ಜನರು ಮೃತಪಟ್ಟಿದ್ದಾರೆ. ಇವರಲ್ಲಿ 30 ಸಾವಿರ ಜನರು ಹೆಲೈಟ್ ಧರಿಸದ ಕಾರಣದಿಂದ ಮೃತಪಟ್ಟಿದ್ದಾರೆ. ಅಪಘಾತಗಳಲ್ಲಿ ಸಾವನ್ನಪ್ಪಿದವರಲ್ಲಿ ಶೇ. 66 ರಷ್ಟು ಜನರು 18-34 ವಯೋಮಾನದವರು. ಶಾಲೆ ಮತ್ತು ಕಾಲೇಜುಗಳ ಬಳಿ ಅವೈಜ್ಞಾನಿಕ ಆಗಮನ ಮತ್ತು ನಿರ್ಗಮನ ದ್ವಾರಗಳಿಂದಾಗಿ 10 ಸಾವಿರ ಮಕ್ಕಳು ಮೃತಪಟ್ಟಿದ್ದಾರೆ.
* ವಾಹನಗಳ ಮೇಲೆ ರೆಟ್ರೊ-ರಿಫ್ಲೆಕ್ಟಿವ್ ಟೇಪ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಮತ್ತು ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ವಾಹನ ಸ್ಥಳ ಟ್ರ್ಯಾಕಿಂಗ್ ಸಾಧನಗಳನ್ನು (VLTD) ಅಳವಡಿಸಲಾಗಿದೆ. ಮಾರ್ಚ್ 2025ರ ವೇಳೆಗೆ ಎಲ್ಲಾ ಮುಖರಹಿತ ಸೇವೆಗಳನ್ನು ದೇಶಾದ್ಯಂತ ಸಂಪೂರ್ಣವಾಗಿ ಸಂಯೋಜಿಸುವ ನಿರೀಕ್ಷೆಯಿದೆ.
ಗುರುವಾರ, 09 ಜನವರಿ 2025
11:30 ಪೂರ್ವಾಹ್ನ
Daily PDF
ಕೇಂದ್ರ ಸರ್ಕಾರ : ರಸ್ತೆ ಅಪಘಾತ ಸಂತ್ರಸ್ತರಿಗೆ 1.5 ಲಕ್ಷ ರೂ.ವರಗೆ `ನಗದು ರಹಿತ ಚಿಕಿತ್ಸೆ ಘೋಷಣೆ
Authored by:
Bhagya R K