➤ ಕರ್ನಾಟಕ ಸರ್ಕಾರವು ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ (BMLTA - Bengaluru Metropolitan Land Transport Authority) ಕಾಯ್ದೆ, 2022ಕ್ಕೆ ಪ್ರಮುಖ ತಿದ್ದುಪಡಿಗಳನ್ನು ತಂದು ಅಧಿಕೃತ ಅಧಿಸೂಚನೆ ಹೊರಡಿಸಿದೆ.
- ಪೂರ್ವಭಾವಿ ತಿದ್ದುಪಡಿ (Retrospective Provision): ಈ ಹೊಸ ತಿದ್ದುಪಡಿಯು 2022ರಲ್ಲಿ ಬಿ.ಎಂ.ಎಲ್.ಟಿ.ಎ ಕಾಯ್ದೆ ಜಾರಿಗೆ ಬಂದ ನಂತರ ಮತ್ತು 2026ರ BMLTA ನಿಯಮಗಳು ಅಧಿಸೂಚನೆಗೊಳ್ಳುವ ಮಧ್ಯೆ ಕೈಗೊಂಡ ಪ್ರಮುಖ ಮೂಲಸೌಕರ್ಯ ಯೋಜನೆಗಳು, ನಿರ್ಧಾರಗಳು ಹಾಗೂ ಪ್ರಕ್ರಿಯೆಗಳಿಗೆ ಕಾನೂನುಬದ್ಧ ಮಾನ್ಯತೆ ನೀಡುತ್ತದೆ.
- ಯಾವ ಯೋಜನೆಗಳಿಗೆ ಅನ್ವಯ? ಬೆಂಗಳೂರಿನ ಪ್ರಮುಖ ಟೆನಲ್ ರೋಡ್ (Tunnel Road) ಯೋಜನೆಗಳು, 11 ಎಲಿವೇಟೆಡ್ ಕಾರಿಡಾರ್ಗಳು (Elevated Corridors) ಹಾಗೂ ಹೆಬ್ಬಾಳದ ಕಿರು ಸುರಂಗ ಮಾರ್ಗದಂತಹ ಪ್ರಮುಖ ಸಾರಿಗೆ ಯೋಜನೆಗಳು ಇದರ ವ್ಯಾಪ್ತಿಗೆ ಬರುತ್ತವೆ.
- ಆಡಳಿತಾತ್ಮಕ ಸುಸ್ಥಿರತೆ: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು (Traffic Congestion) ನಿವಾರಿಸಲು ಮತ್ತು ಮೂಲಸೌಕರ್ಯ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ತಡೆ ಇಲ್ಲದೆ ಆಡಳಿತಾತ್ಮಕ ಮುಂದುವರಿಕೆಯನ್ನು ಖಚಿತಪಡಿಸಿಕೊಳ್ಳಲು ಈ ತಿದ್ದುಪಡಿ ಮಾಡಲಾಗಿದೆ.
➤ BMLTA ಕಾಯ್ದೆಯ ಹಿನ್ನೆಲೆ ಮತ್ತು ಮಹತ್ವ: ಬೆಂಗಳೂರು ಮಹಾನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳ ದಟ್ಟಣೆ ಮತ್ತು ಸಾರಿಗೆ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಒಂದು ಏಕೈಕ ಪ್ರಾಧಿಕಾರವಿರಬೇಕು ಎಂಬ ಉದ್ದೇಶದಿಂದ BMLTA ಕಾಯ್ದೆಯನ್ನು ರೂಪಿಸಲಾಯಿತು.
- ಸೆಕ್ಷನ್ 19 ತಿದ್ದುಪಡಿ: ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಯಾವುದೇ ನಗರ ಸಾರಿಗೆ ಯೋಜನೆಗಳನ್ನು ಕೈಗೊಳ್ಳದಂತೆ ತಡೆಯುವ ನಿಟ್ಟಿನಲ್ಲಿ ಸೆಕ್ಷನ್ 19 ಪ್ರಮುಖವಾಗಿದೆ.
- ಪ್ರಸ್ತುತ ತಿದ್ದುಪಡಿಯ ಮೂಲಕ ಹಿಂದೆ ಆರಂಭಿಸಲಾದ ಮತ್ತು ವಿವಾದ/ನ್ಯಾಯಾಲಯದ ವಿಚಾರಣೆಯ ಹಂತದಲ್ಲಿದ್ದ ಯೋಜನೆಗಳಿಗೆ ಕಾನೂನು ರಕ್ಷಣೆ (Savings Clause) ನೀಡಲಾಗಿದೆ.
ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ (BMLTA) ಕಾಯ್ದೆ ತಿದ್ದುಪಡಿ
Published by Akshata Halli
2 hours ago