* ರಾಜ್ಯ ಕಾನೂನು ಆಯೋಗದ ಅಧ್ಯಕ್ಷರನ್ನಾಗಿ ಹೈಕೋರ್ಟ್ ನಿವೃತ್ತ ನ್ಯಾಯ ಮೂರ್ತಿ ಅಶೋಕ ಬಿ. ಹಿಂಚಿಗೇರಿ ಅವರನ್ನು ನೇಮಿಸಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
* ಈ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಅಶೋಕ ಬಿ. ಹಿಂಚಿಗೇರಿ ಅವರ ಅಧಿಕಾರ ಅವಧಿ ಇರಲಿದೆ ಎಂದು ಕಾನೂನು ಇಲಾಖೆ ತಿಳಿಸಿದೆ.
* 'ಕಾನೂನು ಆಯೋಗದ ಅಧ್ಯಕ್ಷರಾಗಿದ್ದ ಎಸ್.ಆರ್. ಬನ್ನೂರ್‌ಮಠ ಅವರ ಐದು ವರ್ಷಗಳ ಅಧಿಕಾರ ಅವಧಿ ಸೆಪ್ಟೆಂಬರ್ 19ಕ್ಕೆ ಅಂತ್ಯವಾಗಿದ್ದು, ಅವರ ಸ್ಥಾನಕ್ಕೆ ಅಶೋಕ ಹಿಂಚಿಗೇರಿ ಅವರು ನೇಮಕವಾಗಿದ್ದಾರೆ.
ಶುಕ್ರವಾರ, 25 ಅಕ್ಟೋಬರ್ 2024
11:12 ಪೂರ್ವಾಹ್ನ
Daily PDF
ಕಾನೂನು ಆಯೋಗದ ಅಧ್ಯಕ್ಷರಾಗಿ ಅಶೋಕ ಹಿಂಚಿಗೇರಿ ನೇಮಕ
Authored by:
Bhagya R K