* 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಮಿಶ್ರ ತಂಡದ ಸದಸ್ಯ ಬಿ.ಸುಮೀತ್ ರೆಡ್ಡಿ ಬ್ಯಾಡ್ಮಿಂಟನ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಕೋಚಿಂಗ್‌ಗೆ ಒಲವು ತೋರಿ ಈ ಅನುಭವಿ ಡಬಲ್ಸ್ ಆಟಗಾರ ಈ ನಿರ್ಧಾರ ಕೈಗೊಂಡಿದ್ದಾರೆ.
* 33 ವರ್ಷದ ಸುಮೀತ್ 2015ರಲ್ಲಿ ಮನು ಅತ್ರಿ ಜೊತೆಯಲ್ಲಿ ವೃತ್ತಿಜೀವನದ ಶ್ರೇಷ್ಠ 17ನೇ ಸ್ಥಾನವನ್ನು ಮುಟ್ಟಿದರು.
* 2016ರ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ ಈ ಜೋಡಿ, ರಿಯೊ ಒಲಿಂಪಿಕ್ಸ್‌ಗಾಗಿ ಅರ್ಹತೆ ಪಡೆದಿತ್ತು. ಹೈದರಾಬಾದ್‌ನಲ್ಲಿ ನಡೆದ ಏಷ್ಯಾ ತಂಡ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಪಡೆದ ಭಾರತ ಪುರುಷರ ತಂಡದ ಭಾಗವಾಗಿದ್ದರು.
* 2014 ಮತ್ತು 2018ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಸುಮೀತ್, 2015ರ ಮೆಕ್ಸಿಕೊ ಸಿಟಿ ಗ್ರ್ಯಾಂಡ್‌ಪ್ರಿ ಮತ್ತು 2016ರ ಕೆನಡಾ ಓಪನ್‌ನಲ್ಲಿ ಡಬಲ್ಸ್ ಪ್ರಶಸ್ತಿ ಜಯಿಸಿದ್ದರು.
* 2015ರಲ್ಲಿ ಅಮೆರಿಕ ಓಪನ್ ಮತ್ತು ಡಚ್ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದರು. 2017ರ ಸೈಯದ್ ಮೋದಿ ಇಂಟರ್‌ನ್ಯಾಷನಲ್‌ನಲ್ಲಿ ಅಶ್ವಿನಿ ಪೊನ್ನಪ್ಪ ಜೊತೆಗೂಡಿ ರನ್ನರ್ ಅಪ್ ಆಗಿದ್ದರು.
ಕಾಮನ್‌ವೆಲ್ತ್ ಬೆಳ್ಳಿ ವಿಜೇತ ಸುಮೀತ್ ರೆಡ್ಡಿ ಬ್ಯಾಡ್ಮಿಂಟನ್‌ನಿಂದ ನಿವೃತ್ತಿ
Published by Jyoti Angadi
27 ಮಾರ್ಚ್ 2025