* ಫೈರ್‌ಸ್ಯಾಟ್ ಯೋಜನೆಯಡಿ ಪ್ರಥಮ ಉಪಗ್ರಹವನ್ನು ಗೂಗಲ್ ಇತ್ತೀಚೆಗೆ ಉಡಾಯಿಸಿದೆ.
* ಅದು ಭೂಮಿಯ ಕೆಳ ಕಕ್ಷೆಯನ್ನು (ಲೋವರ್ ಅರ್ಬಿಟ್) ಯಶಸ್ವಿಯಾಗಿ ಪ್ರವೇಶಿಸಿದೆ. 50ಕ್ಕೂ ಹೆಚ್ಚು ಉಪಗ್ರಹಗಳ ಸಮೂಹವನ್ನು ಸೃಷ್ಟಿಸುವುದು ಗೂಗಲ್‌ನ ಫೈರ್‌ಸ್ಯಾಟ್ ಯೋಜನೆಯ ಉದ್ದೇಶವಾಗಿದೆ.
* ಅವುಗಳು ಕೃತಕ ಬುದ್ಧಿಮತ್ತೆಯನ್ನು ಬಳಸಿ 5x5 ಮೀಟರ್‌ನಷ್ಟು ಚಿಕ್ಕ ಗಾತ್ರದ ಕಾಡ್ಲಿಚ್ಚನ್ನೂ ಪತ್ತೆ ಹಚ್ಚಲಿವೆ.
* ಕಾಡಿಚ್ಚುಗಳನ್ನು ತುಂಬಾ ಮು೦ಚಿತವಾಗಿಯೇ ಪತ್ತೆಹಚ್ಚುವ ಸಾಮರ್ಥ್ಯವನ್ನು ವೃದ್ಧಿಸುವಂತೆ ಫೈರ್‌ಸ್ಯಾಟ್‌ಅನ್ನು ವಿನ್ಯಾಸಗೊಳಿಸಲಾಗಿದೆ.
* ಕ್ಯಾಲಿಫೋರ್ನಿಯಾದ ಏರೋಸ್ಪೇಸ್ ಸ್ಟಾರ್ಟಪ್ ಮುವಾನ್ ಸ್ಪೇಸ್ ಈ ಮೊದಲ ಉಪಗ್ರಹವನ್ನು ನಿರ್ಮಿಸಿದೆ. ಅದು ಆರು-ಬ್ಯಾಂಡ್ ಮಲ್ಟಿಸ್ಪೆಕ್ಟಲ್ ಇನ್‌ಫ್ರಾರೆಡ್ ಕ್ಯಾಮರಾಗಳಿಂದ ಸಜ್ಜುಗೊಂಡಿದೆ.
* ನಿರ್ದಿಷ್ಟವಾಗಿ ಕಾಡ್ಲಿಚ್ಚುಗಳ ಬಿಸಿಯ ಸುಳಿವನ್ನು (ಹೀಟ್ ಸಿಗ್ನಚರ್) ಗಣನೀಯ ದೂರದಿಂದ ಪತ್ತೆ ಹಚ್ಚಲು ಸಾಧ್ಯವಾಗುವಂತೆ ಅದನ್ನು ವಿಶೇಷವಾಗಿ ನಿರ್ಮಿಸಲಾಗಿದೆ.
* ಫೈರ್‌ಸ್ಯಾಟ್ ಉಪಕ್ರಮ, ಗೂಗಲ್ ರೀಸರ್ಚ್, ಮುವಾನ್ ಸ್ಪೇಸ್, ಅರ್ಥ್ ಫೈರ್ ಅಲಯನ್ಸ್ ಮತ್ತು ಮೂರ್ ಫೌಂಡೇಷನ್ ಪಾಲುದಾರರು. ಗೂಗಲ್ ಆರ್ಗ್ 13 ದಶಲಕ್ಷ ಡಾಲರ್ ನೆರವು ನೀಡಿದ್ದು, ಉಪಗ್ರಹಗಳ ಗುಚ್ಛ ಮತ್ತು ಎಐ ತಂತ್ರಜ್ಞಾನದಿಂದ ಕಾಡಿಚ್ಚುಗಳ ಮೇಲಿನ ನಿಗಾವಳಿ ಸುಧಾರಿಸುವ ಉದ್ದೇಶವಿದೆ.
ಕಾಡ್ಗಿಚ್ಚು ತ್ವರಿತ ಪತ್ತೆಗೆ 'ಫೈರ್‌ಸ್ಯಾಟ್' ಉಪಕ್ರಮ
Published by Jyoti Angadi
28 ಮಾರ್ಚ್ 2025