* ವಿಶ್ವ ಪರಿಸರ ದಿನವು ಪ್ರತಿ ವರ್ಷ ಜೂನ್ 5 ರಂದು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಆಚರಿಸಲಾಗುವ ಒಂದು ಜಾಗತಿಕ ಕಾರ್ಯಕ್ರಮವಾಗಿದೆ.
* ವಿಶ್ವ ಪರಿಸರ ದಿನ(world environment day)ವನ್ನು ಪ್ರತಿ ವರ್ಷ ಜೂನ್ 5ರಂದು ಆಚರಿಸಲಾಗುತ್ತದೆ. ಈ ವರ್ಷ ಪರಿಸರ ದಿನಾಚರಣೆಯ 52ನೇ ವಾರ್ಷಿಕೋತ್ಸವಾಗಿದೆ.
* 2025 ರ ವಿಶ್ವ ಪರಿಸರ ದಿನದ ಥೀಮ್: “ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು” ಎಂಬುದು ಥೀಮ್ ಆಗಿದೆ.
* ಪರಿಸರ ಸಂರಕ್ಷಣೆಯ ಬಗ್ಗೆ ಜನ ಜಾಗೃತಿಯನ್ನು ಮೂಡಿಸುವ ವಿಶೇಷ ದಿನ ಇದಾಗಿದೆ. ಪರಿಸರ ರಕ್ಷಣೆಗೆ ಜನರನ್ನು ಪ್ರೇರೇಪಣೆಗೊಳಿಸಲಾಗುತ್ತದೆ. ಪರಿಸರ ಸಂರಕ್ಷಣೆ ಮತ್ತು ಜನ ಜಾಗೃತಿಗೆ ಹಲವಾರು ವಿಧಾನಗಳು ಮತ್ತು ಥೀಮ್‌ಗಳು ಇವೆ.
* ವಿಶ್ವ ಆರೋಗ್ಯ ಸಂಸ್ಥೆ (WHO) ವರದಿಯ ಪ್ರಕಾರ, 2030 ಮತ್ತು 2050 ರ ನಡುವೆ ಪರಿಸರ ಬದಲಾವಣೆಯಿಂದಾಗಿ ಮಲೇರಿಯಾ, ಅಪೌಷ್ಟಿಕತೆ, ಶಾಖದ ಒತ್ತಡ ಮತ್ತು ಅತಿಸಾರದಿಂದ 2,50,000 ಕ್ಕೂ ಹೆಚ್ಚು ಸಾವುಗಳು ಸಂಭವಿಸುವ ನಿರೀಕ್ಷೆಯಿದೆ.
* ಪರಿಸರ ಎಂಬ ಪದವು ಫ್ರೆಂಚ್ ಭಾಷೆಯ 'ENVIRON' ಎಂಬ ಪದದಿಂದ ಬಂದಿದೆ.
* ಪರಿಸರ ಸಂರಕ್ಷಣೆಯ ಮಾರ್ಗಗಳು :
- ಕೈಗಾರಿಕೆಗಳಿಂದ ಹೊರಬರುವ ತ್ಯಾಜ್ಯ, ವಿಷನೀರನ್ನು ನದಿ ಕಾಲುವೆಗಳಿಗೆ ಬಿಡುವುದಕ್ಕೆ ನಿರ್ಬಂಧ.
- ಕೈಗಾರಿಕೆಗಳಿಂದ ಹೊರಬರುವ ವಿಷಪೂರಿತ ಹೊಗೆ, ಧೂಳು ಸಂಸ್ಕರಣೆ
- ಸಂಶೋಧನೆ, ಆವಿಷ್ಕಾರಗಳಿಂದ ಪರಿಸರಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸಬೇಕು.
- ಹೆಚ್ಚೆಚ್ಚು ಮರಗಿಡಗಳನ್ನು ಬೆಳೆಸಬೇಕು. ಅರಣ್ಯಗಳನ್ನು ಸಂರಕ್ಷಿಸಬೇಕು.
- ಕೃಷಿಗೆ ಸಾಧ್ಯವಾದಷ್ಟು ಜೈವಿಕ ಗೊಬ್ಬರವನ್ನೇ ಬಳಸಬೇಕು.
ಗುರುವಾರ, 05 ಜೂನ್ 2025
10:56 ಪೂರ್ವಾಹ್ನ
Daily PDF
ಜೂನ್ 5 : ವಿಶ್ವ ಪರಿಸರ ದಿನ
Authored by:
Bhagya R K