* ಜೂನ್ 2025ರಲ್ಲಿ ಶೇ. 5.6 ಇದ್ದ ದೇಶದ ನಿರುದ್ಯೋಗ ದರ (UR) ಜುಲೈ 2025ರಲ್ಲಿ ಶೇ. 5.2 ಕ್ಕೆ ಇಳಿದಿದೆ ಎಂದು MoSPI ಬಿಡುಗಡೆ ಮಾಡಿದ ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (PLFS) ತಿಳಿಸಿದೆ.
* ಪುರುಷರಲ್ಲಿ ನಿರುದ್ಯೋಗ ಶೇ. 5.3 ಇದ್ದರೆ, ಮಹಿಳೆಯರಲ್ಲಿ ಶೇ. 5.1 ಕಂಡುಬಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ದರವು ಶೇ. 4.9 ರಿಂದ 4.4 ಕ್ಕೆ ಇಳಿದರೆ, ನಗರಗಳಲ್ಲಿ ಶೇ. 7.1 ರಿಂದ 7.2 ಕ್ಕೆ ಏರಿಕೆ ಕಂಡಿದೆ.
* 15-29 ವರ್ಷದ ಯುವಕರ ನಿರುದ್ಯೋಗ ಜೂನ್‌ನ ಶೇ. 15.3 ರಿಂದ ಜುಲೈನಲ್ಲಿ ಶೇ. 14.9 ಕ್ಕೆ ಇಳಿದಿದೆ. ಆದರೆ ನಗರ ಪ್ರದೇಶಗಳಲ್ಲಿ ಈ ವಯೋಮಾನದ ದರ ಶೇ. 19 ಕ್ಕೆ ಏರಿಕೆಯಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಶೇ. 13 ಕ್ಕೆ ಇಳಿದಿದೆ.
* ಕಾರ್ಮಿಕ ಬಲ ಭಾಗವಹಿಸುವಿಕೆಯ ದರ (LFPR) ಜೂನ್‌ನ ಶೇ. 41 ರಿಂದ ಜುಲೈನಲ್ಲಿ ಶೇ. 41.4 ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇದು ಶೇ. 42 ಆಗಿದ್ದು, ನಗರಗಳಲ್ಲಿ ಶೇ. 40.1 ಕಂಡುಬಂದಿದೆ.
* ಕೆಲಸಗಾರರ ಜನಸಂಖ್ಯಾ ಅನುಪಾತ (WPR) ಜೂನ್‌ನ ಶೇ. 51.2 ರಿಂದ ಜುಲೈನಲ್ಲಿ ಶೇ. 52 ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇದು ಶೇ. 54.4 ಆಗಿದ್ದು, ನಗರಗಳಲ್ಲಿ ಶೇ. 47 ಆಗಿದೆ.
* ಜನವರಿ 2025ರಿಂದ PLFS ನ ಮಾದರಿ ವಿಧಾನ ಪರಿಷ್ಕೃತಗೊಂಡಿದ್ದು, ಜುಲೈನಲ್ಲಿ 7,519 ಘಟಕಗಳು, 89,505 ಮನೆಗಳು ಹಾಗೂ 3.79 ಲಕ್ಷಕ್ಕೂ ಹೆಚ್ಚು ವ್ಯಕ್ತಿಗಳನ್ನು ಸಮೀಕ್ಷೆ ಮಾಡಲಾಗಿದೆ.
ಜುಲೈ 2025ರಲ್ಲಿ ನಿರುದ್ಯೋಗ ದರ ಶೇ. 5.6 ರಿಂದ ಶೇ.5.2ಕ್ಕೆ ಇಳಿಕೆ
Published by Jyoti Angadi
19 ಆಗಸ್ಟ್ 2025