* ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ 10 ಇನ್ನಿಂಗ್ಸ್‌ಗಳಲ್ಲಿ 26 ವಿಕೆಟ್ ಉರುಳಿಸಿದ್ದ ಅಶ್ವಿನ್ ಒಂದು ಸ್ಥಾನವನ್ನು ಜಿಗಿಯುವ ಮೂಲಕ 870 ರೇಟಿಂಗ್ನೊಂದಿಗೆ ವಿಶ್ವದ ನಂ.1 ಟೆಸ್ಟ್ ಬೌಲರ್ ಸ್ಥಾನ ಪಡೆದುಕೊಂಡಿದ್ದಾರೆ.
* ಐಸಿಸಿ ಟೆಸ್ಟ್ ಬೌಲರ್ ರ‍್ಯಾಂಕಿಂಗ್‌ನಲ್ಲಿ ಅಶ್ವಿನ್ ಆರನೇ ಬಾರಿಗೆ ನಂ.1 ಸ್ಥಾನಕ್ಕೆ ತಲುಪಿದ್ದು, ಡಿಸೆಂಬರ್ 2015 ರಲ್ಲಿ ಮೊದಲ ಭಾರಿಗೆ ಈ ಸ್ಥಾನ ಪಡೆದುಕೊಂಡಿದ್ದರು.
* ಬ್ಯಾಟರ್‌ಗಳಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಆರನೇ ಸ್ಥಾನದಲಿದ್ದರೆ. ಶುಭಮನ್ ಗಿಲ್ ಅವರು 20ನೇ ಸ್ಥಾನಕ್ಕೆ ಜಿಗಿದಿದ್ದಾರೆ, ಐದು ಟೆಸ್ಟ್‌ಗಳಲ್ಲಿ ಹಲವು ದಾಖಲೆಗಳನ್ನು ಮುರಿದ ಯಶಸ್ವಿ ಜೈಸ್ವಾಲ್ ಎರಡು ಸ್ಥಾನ ಮೇಲೇರಿ ಎಂಟನೇ ಸ್ಥಾನಕ್ಕೆ ತಲುಪಿದ್ದಾರೆ. ಇಂಗ್ಲೆಂಡ್ ಆಟಗಾರರಾದ ಝಾಕ್ ಕ್ರಾಲಿ ಮತ್ತು ಜಾನಿ ಬೈರ್‌ಸ್ಟೋವ್ ಅವರು ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ತಲಾ ಒಂದು ಸ್ಲಾಟ್ ಮೇಲೇರಿದ್ದು, ಸ್ಪಿನ್ನರ್ ಶೋಯೆಬ್ ಬಶೀರ್ 11 ಸ್ಥಾನ ಮೇಲೇರಿ 71ನೇ ಸ್ಥಾನಕ್ಕೆ ತಲುಪಿದ್ದಾರೆ.
ಜಸ್ಪ್ರೀತ್ ಬುಮ್ರಾ ಅವರನ್ನು ಹಿಂದಿಕ್ಕಿ ಅಶ್ವಿನ್ ವಿಶ್ವದ ನಂ.1 ಟೆಸ್ಟ್ ಬೌಲರ್
Published by Akshata Halli
14 ಮಾರ್ಚ್ 2024