* ಇಟಲಿಯಲ್ಲಿ ನಡೆದ 1990ರ ವಿಶ್ವಕಪ್ ಫೈನಲ್‌ನಲ್ಲಿ ಪಶ್ಚಿಮ ಜರ್ಮನಿ ಪರ 'ಪೆನಾಲ್ಟಿ' ಮೂಲಕ ನಿರ್ಣಾಯಕ ಗೋಲು ಗಳಿಸಿದ್ದ ಆ್ಯಂಡ್ರಿಯಾಸ್ ಬ್ರಿಮ್ (63) ಫೆ 20 ರಂದು ನಿಧನರಾದರು ಎಂದು ಬಯರ್ನ್ ಮ್ಯೂನಿಕ್ ಕ್ಲಬ್ ತಿಳಿಸಿದೆ.
* ಲೆಫ್ಟ್ ಬ್ಯಾಕ್ ಆಗಿ ಆಡುತ್ತಿದ್ದ ಬ್ರಿಮ್ ಎರಡು ವರ್ಷ (1986-88) ಬಯರ್ನ್ ಕ್ಲಬ್‌ಗೆ ಆಡಿದ್ದರು. 1987ರಲ್ಲಿ ಈ ಕ್ಲಬ್ ಬುಂಡೆಸ್‌ಲೀಗಾ (ಜರ್ಮನಿಯ ಕ್ಲಬ್ ಚಾಂಪಿಯನ್‌ಷಿಪ್) ಗೆದ್ದುಕೊಂಡಿತ್ತು.
* ಜರ್ಮನಿಯ ಇನ್ನೊಬ್ಬ ಮಹಾನ್ ಆಟಗಾರ ಫ್ರಾಂಝ್ ಬೆಕೆನ್‌ಬಾರ್ ಕಳೆದ ತಿಂಗಳು ಮೃತಪಟ್ಟಿದ್ದರು.
* 'ಆ್ಯಂಡಿ ನಮ್ಮ ವಿಶ್ವಕಪ್ ಹೀರೊ. ಆದರೆ, ನನಗೆ ಅವರು ಅದಕ್ಕಿಂತ ಹೆಚ್ಚು- ಅವರು ನನ್ನ ಆಪ್ತ ಮಿತ್ರ ಮತ್ತು ಜೊತೆಗಾರ' ಎಂದು ಜರ್ಮನಿಯ ಇನ್ನೊಬ್ಬ ಫುಟ್ ಬಾಲ್ ತಾರೆ ರೂಡಿ ವಾಲರ್ ಶೋಕ ಸೂಚಿಸಿದರು.
ಬುಧವಾರ, 21 ಫೆಬ್ರುವರಿ 2024
10:38 ಪೂರ್ವಾಹ್ನ
Daily PDF
ಜರ್ಮನಿ ಫುಟ್ ಬಾಲ ತಾರೆ ಬ್ರಿಮ್ ನಿಧನ
Authored by:
Akshata Halli